
ವಿಶ್ವಕರ್ಮವು ಪುರಾತನ ಕಾಲದಿಂದ ನಡೆದು ಬಂದ ಸಮಾಜವಾಗಿದ್ದು, ಈ ಸಮಾಜದ ಗುರುಗಳು ಎಲ್ಲಾ ದೇವರಿಗೂ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮAದಿರಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭರತಖಂಡವು ಧಾರ್ಮಿಕ ಹಾಗೂ ಜನ ಜೀವನ ಸಂಸ್ಕೃತಿಯಿAದ ನಡೆದು ಬಂದಿದೆ. ಇಲ್ಲಿ ಉತ್ತಮ ಗುರು ಪಡೆದರೆ ಮಾತ್ರ ಉತ್ತಮ ಸಂಸ್ಕೃತಿಯನ್ನು ಪಡೆಯಲು ಸಾಧ್ಯ. ಇಂತಹ ಗುರುವಿನ ಸಂಸ್ಕೃತಿಯನ್ನು ವಿಶ್ವಕರ್ಮ ಸಮಾಜ ಒಳಗೊಂಡಿದ್ದು, ಈ ಸಮಾಜದಲ್ಲಿ ಹುಟ್ಟಿದ ನೀವೆಲ್ಲಾ ಭಾಗ್ಯವಂತರು ಎಂದರು.
ಈ ಸಮಾಜದೊಟ್ಟಿಗೆ ನನಗೆ ಬಹಳ ವರ್ಷಗಳಿಂದ ಉತ್ತಮ ಒಡನಾಟವಿದೆ. ಇವರ ಆಚಾರ, ವಿಚಾರವನ್ನು ತುಂಬಾ ಹತ್ತಿರದಿಂದ ಬಲ್ಲವನಾಗಿದ್ದು, ಇವರು ಇದುವರೆಗೂ ಯಾವುದೇ ಅನ್ಯ ಸಮಾಜಕ್ಕೆ ಅನ್ಯಾಯ ಮಾಡದೆ ಸ್ವಾವಲಂಬನೆಯಿAದ ಬದುಕನ್ನು ನಡೆಸುತ್ತಿದ್ದಾರೆ. ಹಾಗೂ ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ವೃತ್ತಿಯ ಆಧಾರದಿಂದ ನಾವೆಲ್ಲಾ ಬೇರೆ ಬೇರೆ ಜಾತಿಯಲ್ಲಿ ಹುಟ್ಟಿದ್ದೇವೆ. ಆದರೆ ಇದನ್ನು ಮೀರಿ ನಾವು ಮನುಷ್ಯ ದೃಷ್ಟಿಯಿಂದ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಮನುಷ್ಯತ್ವದಿಂದ ಕಾಣಬೇಕು. ಯಾವುದೇ ಸಮಾಜವಾಗಲಿ ಅದರ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಕಾರ್ಯಸಿದ್ದಿ ಮಾಡಿಕೊಂಡು ಮಾನವೀಯ ಗುಣಗಳನ್ನು ವೃದ್ದಿಸಿಕೊಳ್ಳಬೇಕು ಎಂದರು.
ಬಸವಣ್ಣ 12 ನೇ ಶತಮಾನದಲ್ಲಿ ಶೋಷಣೆಗೆ ಒಳಗಾದ ಸಣ್ಣ ಸಣ್ಣ ಗುಂಪುಗಳನ್ನು ಒಟ್ಟುಗೂಡಿಸಿ ಅವರ ಅಭಿವೃದ್ದಿಗಾಗಿ ಶ್ರಮಿಸಿದರು. ಅದರಂತೆ ಇಂದಿನ ಸರ್ಕಾರವೂ ಇಂತಹ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಲೆ ತರಲು ಅನೇಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಿಂದ ಹೊರಗೆ ಉಳಿಯದೆ ನೀವೆಲ್ಲರೂ ಪಾಲ್ಗೊಳ್ಳಬೇಕು. ಇದು ನಿಮ್ಮೆಲ್ಲರ ಹಕ್ಕು ಎಂದು ತಿಳಿಸಿದರು.
ಚಿತ್ರದುರ್ಗ ರಾಷ್ಟಿçÃಯ ವಿಶ್ವಕರ್ಮ ವಂಶಿ ಸೇನೆಯ ಜಿಲ್ಲಾಧ್ಯಕ್ಷೆ ಪಿ.ಜಿ.ಅನಿತಲಕ್ಷಿö್ಮà ಆಚಾರ್ಯ ಉಪನ್ಯಾಸ ನೀಡಿ, ಪಂಚಬ್ರಹ್ಮ ಸ್ತೋತ್ರವು ವಿಶ್ವಕರ್ಮದ ಪ್ರಾಮುಖ್ಯ ಬಗ್ಗೆ ತಿಳಿಸಿದೆ. ವಿಶ್ವಕರ್ಮರನ್ನು ಜ್ಞಾನ ಮತ್ತು ವಿಜ್ಞಾನಗಳ ಕರ್ತೃ ಹಾಗೂ ಸದಾ ಪಂಚಭೂತಗಳೊAದಿಗೆ ಕೆಲಸ ಮಾಡುವ ವಿಜ್ಞಾನಿಗಳೆಂದು ಭಗವದ್ಗೀತೆಯು ಹೇಳಿದೆ ಎಂದು ತಿಳಿಸಿದರು.
ವಿಶ್ವ್ವಕರ್ಮರು ವೈದಿಕ ಶಾಸ್ತçದ ಜೊತೆಗೆ ಶಿಲ್ಪಶಾಸ್ತçವನ್ನು ಕಲಿತಿದ್ದು, ಶಿಲ್ಪಸಹಿತ ಬ್ರಾಹ್ಮಣ ಹೊಂದಿರುವ ಕುಲಶ್ರೇಷ್ಠರಾಗಿದ್ದಾರೆ. ವಿಶ್ವಕರ್ಮ ಸಮಾಜವು ಉತ್ಪಾದನಾ ಸಂಸ್ಕೃತಿಯನ್ನು ಈ ಜಗತ್ತಿಗೆ ಪರಿಚಯಿಸಿದೆ. ದೇಶದ ಬೆನ್ನೆಲುಬು ರೈತನಾದರೆ, ರೈತನ ಬೆನ್ನೆಲುಬು ವಿಶ್ವಕರ್ಮರಾಗಿದ್ದಾರೆ ಎಂದರು.
ಯುನೆಸ್ಕೊ ಪಾರಂಪರಿಕ ಪಟ್ಟಿಯಲ್ಲಿ ಭಾರತದ ಶಿಲ್ಪಕಲೆಯಗಳು ಸೇರ್ಪಡೆಯಾಗಿದೆ ಎಂದರೆ ಅದಕ್ಕೆ ಕಾರಣ ವಿಶ್ವಕರ್ಮರು. ನಮ್ಮ ಪೂರ್ವಜರು ದೇಶದ ಸಾಂಸ್ಕೃತಿ ಹಾಗೂ ಪಾರಂಪರಿಕತೆಗೆ ನೀಡಿರುವ ಕೊಡುಗೆಯನ್ನು ನೋಡಲು ದೇಶ ವಿದೇಶದಿಂದ ಬರುತ್ತಿದ್ದು, ನಮ್ಮ ವಾಸ್ತುಶಿಲ್ಪ ಧರ್ಮಕ್ಕೆ ಕಳಶಪ್ರಾಯವಾಗಿದೆ ಎಂದರು.
ನಮ್ಮ ಸಮುದಾಯ ಅಭಿವೃದ್ಧಿ ಆಗಬೇಕಾದರೆ ನಮ್ಮನ್ನು ನಾವು ಕಲೆಗೆ ಒಳಪಡಿಸಿಕೊಳ್ಳಬೇಕು. ಅದನ್ನು ಉಳಿಸುವ ಕೆಲಸ ಮಾಡಬೇಕು. ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು, ತಿದ್ದಿಕೊಳ್ಳಬೇಕು. ಮೂಡನಂಭಿಕೆಯಿAದ ಆಚೆ ಬರಬೇಕು. ಹಿಂದೂ ಮುಸ್ಲಿಂ ಒಳಗೊಂಡAತಹ ಭಾವೈಕ್ಯ ಮಂತ್ರ ನಮ್ಮ ಸಮಾಜದಲ್ಲಿದೆ. ಇದನ್ನು ಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಿಶ್ವ್ವಕರ್ಮ ಸಮಾಜವು ಸಾಮಾಜಿಕ ಅಸಮಾನತೆ ಒಳಗಾಗಿದ್ದು, ಸಮಾನತೆಯನ್ನು ಪಡೆಯುವಲ್ಲಿ ಕಾರ್ಯ ಮಾಡಬೇಕು. ಈ ಸಮಾಜವು ಸಂಪ್ರದಾಯವಾಗಿ ಮುಂದೆ ಬಂದಿದೆ ಹೊರತು ಸಾಮಾಜಿಕವಾಗಿ ಇನ್ನೂ ನೋವು ಅನುಭವಿಸುತ್ತಿದೆ. ಸರ್ಕಾರವೂ ವಿಶ್ವಕರ್ಮದ ಸಮಾಜದ ಅಭಿವೃದ್ದಿಗಾಗಿ ಬಜೆಟ್‌ನಲ್ಲಿ 150 ರಿಂದ 180 ಕೋಟಿ ಮೀಸಲಿಟ್ಟಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ವಯಂ ಗೌರವದಿಂದ ಬದುಕುವುದನ್ನ ಕಲಿಯಬೇಕು. ಅನೌಪಚಾರಿಕ ಸಂಘಟನೆಯಿAದ ಔಪಚಾರಿಕ ಸಂಘಟನೆಗೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ಕಾಳಿಕಾ ಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ರಮೇಶ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಹಾಗೂ ಸಮಾಜ ಮುಖಂಡರು ಹಾಜರಿದ್ದರು.