ಶಿವಮೊಗ್ಗ ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ, ನಿಗದಿತ ಶಬ್ದದ ಮಿತಿಯ ನಿಯಮವನ್ನು ಉಲ್ಲಂಘಿಸಿ ಶಬ್ದ ಮಾಲಿನ್ಯವನ್ನುಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಸೌಂಡ್ ಬಾಕ್ಸ್ (ಡಿ.ಜೆ) ಗಳನ್ನು ಬಳಕೆ ಮಾಡಿದವರ ವಿರುದ್ಧ ವಿವಿಧ ಕಾಯ್ದೆಗಳ ಅಡಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 55 ಪ್ರಕರಣಗಳನ್ನು ದಾಖಲಿಸಿದ್ದು, ಸದರಿಯವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.

ಮುಂದಿನ ದಿನಗಳಲ್ಲಿ ನಿಗದಿತ ಶಬ್ದದ ಮಿತಿಯ ನಿಯಮವನ್ನು ಉಲ್ಲಂಘಿಸಿ ಶಬ್ದ ಮಾಲಿನ್ಯವನ್ನುಂಟು ಮಾಡುವವರ ವಿರುದ್ಧ ಇನ್ನೂ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.

Leave a Reply

Your email address will not be published. Required fields are marked *