ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಪಾಲಿಕೆಯ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ 2025 ಅಂಗವಾಗಿ ನಗರದ ರಮಣ ಶೆಟ್ಟಿ ಪಾರ್ಕ್ ನಿಂದ ನೆಹರು ರಸ್ತೆ ಮಾರ್ಗವಾಗಿ ಕುವೆಂಪು ರಂಗ ಮಂದಿರ ವರೆಗೆ ಪಾಲಿಕೆಯ ನೌಕರರು ವಿವಿಧ ವೇಷ ಭೂಷಣ ಮತ್ತು ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ವಿಶೇಷವೇನೆಂದರೆ ಮೆರವಣಿಗೆ ಸಮಯದಲ್ಲಿ ಆಯುಕ್ತರದ ಮಾಯಣ್ಣ ಗೌಡ ರವರು ಕಾರ್ಮಿಕರೊಂದಿಗೆ ಕುಣಿದು ಕುಪ್ಪಳಿಸಿ ಪೌರ ಕಾರ್ಮಿಕರ ಜೊತೆ ಸಂಭ್ರಮ ಹಂಚಿಕೊಂಡರು.


ಕುವೆಂಪು ರಂಗ ಮಂದಿರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಚನ್ನಬಸಪ್ಪ ಪೌರ ಕಾರ್ಮಿಕರು ದಸರಾ ಹಬ್ಬಕ್ಕೆ ಹಣ ಕೋಡಿ ಎಂದು ಕೇಳುತ್ತಾರೆ. ಆದರೆ ನಗರದ ನಾಯಕರಿಕರಲ್ಲಿ ನನ್ನ ನಂಬ್ರ ವಿನಂತಿ ಏನೆಂದರೆ ನಿಮ್ಮ ಸಾಧ್ಯವಾದರೆ ಕೈಯಲ್ಲಾದಷ್ಟು ಸಹಾಯ ಮಾಡಿ. ಆದರೆ ನಿಮ್ಮ ಮನೆಯನ್ನು ಸ್ವಚ್ಛವಾಗಿಡಲು ಸಹಕಾರ ನೀಡುವ ಅವರಿಗೆ ನೀವು ಅಪಮಾನ ಮಾಡಬೇಡಿ. ಅವರು ಅತ್ಯಂತ ಸ್ವಾಭಿಮಾನದಿಂದ ಬದುಕುವವರು ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್ ಗೋವಿಂದ ಉಪಾಧ್ಯಕ್ಷ ಪಿ ಕುಮಾರ್ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಖಜಾಂಚಿ ಮಂಜಣ್ಣ ಹಾಗೂ ಪೌರಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗೂ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದರು.

Leave a Reply

Your email address will not be published. Required fields are marked *