ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದವರಿಂದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ, ಸಿದ್ದಾರ್ಥ ಗಾರ್ಡನ್ ಮತ್ತು ಝೂ ಮುನ್ಸಿಪಲ್ ಕಾರ್ಪೋರೇಷನ್, ಔರಂಗಾಬಾದ್- ಮಹಾರಾಷ್ಟç ಮತ್ತು ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮುನ್ಸಿಪಲ್ ಕಾರ್ಪೋರೇಷನ್, ಇಂದೋರ್ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕಿದ್ದು ಈ ಕಾರ್ಯಕ್ರಮ ಸೆ. 25 ರಿಂದ ಅ.02ರವರೆಗೆ ನಡೆಯಲಿದೆ.


ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ದಿಂದ ಸಿದ್ದಾರ್ಥ ಗಾರ್ಡನ್ ಮತ್ತು ಝೂ ಮುನ್ಸಿಪಲ್ ಕಾರ್ಪೋರೇಷನ್, ಔರಂಗಾಬಾದ್- ಮಹಾರಾಷ್ಟçಕ್ಕೆ ಕರಡಿ (Sloth bear) -2, ಸಿಂಹ (Asiatic Lion)-2 ಹಾಗೂ ನರಿ (Golden Jackal) -2 ಕಳುಹಿಸುತ್ತಿದ್ದು ಅಲ್ಲಿಂದ ಹುಲಿ (Royal Bengal Tiger) -2, ಬಿಳಿ ಹುಲಿ (White Tiger)-1 ತರಿಸಲಾಗುತ್ತಿದೆ. ಹಾಗೆಯೇ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ದಿಂದ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮುನ್ಸಿಪಲ್ ಕಾರ್ಪೋರೇಷನ್, ಇಂದೋರ್‌ಗೆ ಕಾಡುಕೋಣ (Indian Gaur) -4, ಆಸ್ಟಿçÃಚ್ (Ostrich) – 4 ಕಳುಹಿಸಲಾಗುತ್ತಿದ್ದು ಅಲ್ಲಿಂದ ಸಿಂಹ (Asiatic Lion)–2, ಹುಲಿ (Royal Bengal Tiger)-1 ತರಿಸಲಾಗುತ್ತಿದೆ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *