
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಡೆಸಲಾಗುವ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳ ಭಾಗವಾಗಿ 26ರಂದು ಶ್ರೀ ರಾಜಶೇಖರ್ ಪೊಲೀಸ್ ವೃತ್ತ ನಿರೀಕ್ಷಕರು, ಸೊರಬ ವೃತ್ತ ಹಾಗೂ ಶ್ರೀ ನವೀನ್ ಪೊಲೀಸ್ ಉಪ ನಿರೀಕ್ಷಕರು, ಸೊರಬ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸೊರಬದಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದ್ದು, ಕಲ್ಲಂಗಡಿ ಹಣ್ಣು ನೇರವಾಗಿ ನೆಲದ ಮೇಲೆ ಬಿದ್ದಾಗ ಯಾವ ರೀತಿ ಹೊಡೆದು ಹೋಗುತ್ತದೆ ಎಂದು ಹಾಗೂ ಹೆಲ್ಮೆಟ್
ನ ಒಳಗೆ ಕಲ್ಲಂಗಡಿ ಹಣ್ಣನ್ನು ಇರಿಸಿ ನೆಲದ ಮೇಲೆ ಬೀಳಿಸಿದಾಗ
ಯಾವುದೇ ಹಾನಿ ಆಗಿರುವುದಿಲ್ಲವೆಂದು ಪ್ರತ್ಯಕ್ಷವಾಗಿ ತೋರಿಸುವ ಮೂಲಕ ಹೆಲ್ಮೆಟ್ ನ ಉಪಯೋಗದ ಬಗ್ಗೆ ಅರಿವು ಮೂಡಿಸಿರುತ್ತಾರೆ.