ದಿನಾಂಕ: 11/09/2025 ರಂದು ಬೆಳಗ್ಗೆ 83 ವರ್ಷದ ಶಿವಮೊಗ್ಗ ರವೀಂದ್ರ ನಗರದ ವಾಸಿ ಮಹಿಳೆಯೊಬ್ಬರು ರವೀಂದ್ರ ನಗರ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಬೈಕ್ ನಲ್ಲಿ ಬಂದು ಕೊರಳಲ್ಲಿದ್ದ 25 ಗ್ರಾಂ ತೂಕದ 150000/- ಬೆಲೆಬಾಳುವ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ನಂ: 0081/2025 ಕಲಂ 309(4) ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶ್ರೀ. ಎ ಜಿ ಕಾರಿಯಪ್ಪ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶ್ರೀ. ಎಸ್ ರಮೇಶ್ ಕುಮಾರ್, ರವರ ಮಾರ್ಗದರ್ಶನದಲ್ಲಲಿ, ಶಿವಮೊಗ್ಗ ಉಪ ವಿಭಾಗ-ಬಿ ಡಿ ವೈ ಎಸ್ ಪಿ ಶ್ರೀ. ಸಂಜೀವ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆ ಪಿ.ಐ. ಶ್ರೀ. ಸಿದ್ದೇಗೌಡ ಹೆಚ್ ಎಂ, ಪಿಎಸ್ಐ ಶ್ರೀಮತಿ ಕೋಮಲ ಬಿ ಆರ್, ಎ ಎಸ್ ಐ ಕರಿಬಸಪ್ಪ ಸಿ ಆರ್ ರವರು ಹಾಗೂ ಸಿಬ್ಬಂದಿಯವರಾದ ಎಚ್ ಸಿ ನಾಗರಾಜ್ ಕೆ, ಸಿ ಪಿ ಸಿ- ವಸಂತ ಜಿ, ಸಚಿನ್ ಎಚ್ ಎಸ್, ವೀರೇಶ್ ಬಿ ಎಂ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕ:12/09/2025 ರಂದು ಆರೋಪಿ ಹರೀಶ್ ಬಿ ಎಚ್, 39 ವರ್ಷ, ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕೆಲಸ ವಾಸ ರೇಣುಕಾ ನಿಲಯ ರವೀಂದ್ರ ನಗರ 6ನೇ ಕ್ರಾಸ್ ಶಿವಮೊಗ್ಗ ಸ್ವಂತ ಊರು ಬೇವಿನಹಳ್ಳಿ ಬಾಣಾವರ ಹೋಬಳಿ ಅರಸೀಕೆರೆ ತಾಲೂಕು ಈತನನ್ನು ದಸ್ತಗಿರಿ ಮಾಡಿ* ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತದೆ.

ಆರೋಪಿತನ ಬಂಧನದಿಂದ ಜಯನಗರ ಪೊಲೀಸ್ ಠಾಣೆಯ ಒಟ್ಟು ಮೂರು ಸರಗಳ್ಳತನ ಪ್ರಕರಣಗಳು ಪತ್ತೆ ಆಗಿರುತ್ತದೆ.ಮೂರು ಪ್ರಕರಣಗಳಲ್ಲಿ ಸರಗಳ್ಳತನವಾಗಿದ್ದು ಒಟ್ಟು 71 ಗ್ರಾಂ ನ 03 ಬಂಗಾರದ ಸರಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಅಂದಾಜು ಮೌಲ್ಯ 710000/- ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಪ್ಲೆಂಡರ್ ಬೈಕ್ ಅನ್ನು ಮೌಲ್ಯ 30000/- ಅಮಾನತ್ತು ಪಡಿಸಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *