
ಕರವೇ ಸ್ವಾಭಿಮಾನಿ ಬಣಕ್ಕೆ ನೂತನ ತಾಲೂಕು ಅಧ್ಯಕ್ಷರ ನೇಮಕವಾಗಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಸಾಗರ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಜನಾರ್ಧನ್ ಪೂಜಾರಿ ಹಾಗೂ ಉಪ ಅದ್ಯಕ್ಷರನ್ನಾಗಿ ಅರುಣ್ ಕುಮಾರ್ ಪಾಳೆಗಾರ್ ಅವರನ್ನು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸರ್ವಾನು ಮತದಿಂದ ಜಿಲ್ಲಾ ಘಟಕ ವತಿಯಿಂದ ಆಯ್ಕೆ ಮಾಡಲಾಗಿದೆ.

ಇವರಿಗೆ ನಾಡು ನುಡಿ ನೆಲ ಜಲ ಭಾಷೆ ರೈತ ಪರ ವಿದ್ಯಾರ್ಥಿಪರ ಶೋಷಿತರ ಪರ ಧನಿಯಾಗಿರುವಂತೆ ಆದೇಶ ನೀಡಲಾಗಿದೆ.ತಮ್ಮ ಅಧೀನ ಪದಾಧಿಕಾರಿಗಳ ಆಯ್ಕೆ ಅಧಿಕಾರ ಹೊಂದಿದ್ದು ಸಂಘಟನೆಗೆ ಯಾವುದೇ ದಕ್ಕೆ ಬರದಂತೆ ಕಾರ್ಯ ನಿರ್ವಹಿಸಬೇಕೆಂದು ಸಂಘಟನೆ ಆಶಿಸುತ್ತದೆ.ಈ ಸಂದರ್ಭದಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ನಡೆಯಿತು.ಜಿಲ್ಲಾ ಕಾರ್ಯಾಧ್ಯಕ್ಷ ರಾಗಿ ಉಮೇಶ್ ಗದ್ದೆ ಮನೆ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಗಂಗಾಧರ್ ಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಸಂತೋಷ್ ಫ್ರಾಂಕ್ಲಿನ್ ಹಾಗೂ ಗ್ರಾಮಾಂತರ ಅಧ್ಯಕ್ಷರಾಗಿ ಮಂಜುನಾಥ್ ಹೆಚ್ ಎನ್ ಹಾಗೂ ಮಹಿಳಾ ಜಿಲ್ಲಾ ಘಟಕದ ಕಾರ್ಯ ಅಧ್ಯಕ್ಷರಾಗಿ ವೀಣಾ. ಎಚ್ ಉಪಾಧ್ಯಕ್ಷರಾಗಿ ಪದ್ಮ ಎನ್ ಹಾಗೂ ಮಾಲತಿ ಟಿ ಜಿಲ್ಲಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆರತಿ ತಿವಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಜ್ಯೋತಿ ಎನ್. ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಯನ್ನು ಸಹ ನಡೆಸಲಾಯಿತು.ಹಾಗೂ ಸದಸ್ಯತ್ವ ಅಭಿಯಾನವನ್ನು ನಡೆಯಿತು. ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ ಎಸ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ ಪತ್ರಿಕಾ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಲತೇಶ್ ನಗರ ಅಧ್ಯಕ್ಷರಾದ ಜೀವನ್ ಸಭೆಯಲ್ಲಿ ಮಾಧ್ಯಮ ಸಲಹೆಗಾರ ಅನಿಲ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ರಾಮು. ನಾಗರಾಜ್ ಸಾಧಿಕ್ ನೂರುಲ್ಲಾ ಪ್ರವೀಣ್ ಕುಮಾರ್ ರಾಮಣ್ಣ ಟಾಟಾ ಎಸ್ . ಪ್ರದೀಪ್ ಕಾಂತಾ ರಾಜ್ ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.