ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಕಾಯ್ದೆ ಅಧಿನಿಯಮ 1997 ರ ಕಲಂ 25 ರನ್ವಯ ಶಿವಮೊಗ್ಗ ಜಿಲ್ಲೆಯ ಬಿ ಮತ್ತು ಸಿ ಪ್ರವರ್ಗ ಮುಜರಾಯಿ ದೇವಾಲಯಗಳ ಅರ್ಹ ಸದಸ್ಯರುಗಳನ್ನು ನಿಗದಿಪಡಿಸಿದ ಅರ್ಹತೆಗಳನುಸಾರವಾಗಿ ವ್ಯವಸ್ಥಾಪನಾ ಸಮಿತಿಯನ್ನು ಮುಂದಿನ 3 ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾಧಿಗಳು/ ಸಾರ್ವಜನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಶಿವಮೊಗ್ಗ ತಾಲ್ಲೂಕಿನಲ್ಲಿ ಪ್ರವರ್ಗ “ಸಿ” ಯಲ್ಲಿ ಶಿವಮೊಗ್ಗ ಗ್ರಾಮದ ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಹೊಸನಗರ ತಾಲ್ಲೂಕಿನ ಬಾಣಿಗ ಗ್ರಾಮದ ಶ್ರೀ ವೆಂಕಟರಮಣ ದೇವರು, ಅರಮನೆ ಕೊಪ್ಪ ಗ್ರಾಮದ ಶ್ರೀ ಬಪ್ಪನಮನೆ ಗೋಪಾಲಕೃಷ್ಣ ದೇವಸ್ಥಾನ, ತಳಲೆ ಗ್ರಾಮದ ಶ್ರೀ ತಿರುಮಲ ವೆಂಕಟರಮಣ ದೇವರು, ಹೊಸಕೆಸರೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರು, ಕಡಸೂರು ಗ್ರಾಮದ ಶ್ರೀ ವಿನಾಯಕ ದೇವರು, ಉಳ್ತಿಗ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವರು, ಹೊಸಕೆಸರೆ ಗ್ರಾಮದ ಶ್ರೀ ಜೇನುಕಲ್ಲಮ್ಮ ದೇವರು ಅಮ್ಮನಘಟ್ಟ, ಅಂಡಗದೂದುರು ಗ್ರಾಮದ ಶ್ರೀ ಹೆಬ್ಬುಲಿಗೆ ಲಕ್ಷ್ಮೀನರಸಿಂಹ ದೇವರು, ರಿಪ್ಪನ್‌ಪೇಟೆ ಗ್ರಾಮದ ಶ್ರೀಸಿದ್ದಿ ವಿನಾಯದ ದೇವರು, ಬರುವೆ ಗ್ರಾಮದ ಶ್ರೀಕಲಾನಾಥ ದೇವರು, ಹುಂಚ ಗ್ರಾಮದ ಕಮ್ಮಟೇಶ್ವರ ದೇವರು, ಯಡಿಯೂರು ಗ್ರಾಮದ ಶ್ರೀರಾಮಭೂತ ದೇವರು, ಕಚ್ಚಿಗೆ ಬೈಲು ಗ್ರಾಮದ ಶ್ರೀ ಮಾನವಿಹೊಳೆ ಬಸವಣ್ಣ ದೇವರು, ಹೊಸಕೆಸರೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರು, ಭೈಸೆ ಗ್ರಾಮದ ಶ್ರೀ ನೇತ್ರಾಭೈಲು ಚೌಡ ದೇವರು, ಅಮೃತ ಗ್ರಾಮದ ಶ್ರೀ ಭಳ್ಳಶ್ವರ ದೇವರು, ಕಡಸೂರು ಗ್ರಾಮದ ಶ್ರೀ ವಿನಾಯಕ ದೇವರು, ಹುಂಚ ಗ್ರಾಮದ ಶ್ರೀ ವೀರಭದ್ರ ದೇವರು, ಕಮ್ಮಚ್ಚಿ ಗ್ರಾಮದ ಶ್ರೀ ತಿರುಮಲ ವೆಂಕಟರಮಣ ದೇವರು, ಕಿಳಂದೂರು ಗ್ರಾಮದ ಶ್ರೀ ಮರ್ಕಾಂಡೇಶ್ವರ ದೇವರು, ಬ್ರಾಹ್ಮಣದೇವರು ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ದೇವರು, ಬ್ರಾಹ್ಮಣವಾಡ ಗ್ರಾಮದ ಶ್ರೀ ವಿನಾಯಕ ದೇವರು, ಮತ್ತಿಕೈ ಗ್ರಾಮದ ಶ್ರೀ ಅಂಗಡೇರಮನೆ ಶ್ರೀ ಲಕ್ಷ್ಮೀನಾರಾಯಣ ದೇವರು ಇವುಗಳು ವ್ಯವಸ್ಥಾಪನಾ ಸಮಿತಿ ರಚನೆ ಮಾಡಲು ಬಾಕಿ ಇರುವ ಸಂಸ್ಥೆಗಳು.
ಆಸಕ್ತರು ನಿಗದಿತ ನಮೂನೆ ಅರ್ಜಿಗಳನ್ನು ಆಯಾ ತಾಲ್ಲೂಕು ತಹಶೀಲ್ದಾರ್ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಅ.24 ರೊಳಗಾಗಿ ಸಲ್ಲಿಸುವುದು.

ಅರ್ಜಿ ಸಲ್ಲಿಸಬಯಸುವ ಆಸಕ್ತ ಕನಿಷ್ಟ 25 ವರ್ಷ ವಯಸ್ಸಿನವರಾಗಿರಬೇಕು. ಒಂದು ಅಧಿಸೂಚಿತ ಸಂಸ್ಥೆಯ/ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವವನ್ನು ಕೋರಿ ಅರ್ಜಿಯನ್ನು ನಿಗದಿತ ನಮೂನೆ-1(ಬಿ)(22 ನೇ ನಿಯಮ)ರಲ್ಲಿ ಭರ್ತಿ ಮಾಡಿ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ನೇರವಾಗಿ ಸಲ್ಲಿಸಬಹುದೆಂದು ಹಾಗೂ ನಿಗದಿಪಡಿಸಿ ದಿನಾಂಕ ನಂತರದ ಸ್ವೀಕೃತವಾಗುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *