ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತಿ ವತಿಯಿಂದ 2024-25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪಾರಿತೋಷಕ ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಿದೆ.


ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ಹಬ್ಬದ ಪಾರಿತೋಷಕ, ಬಿಎ, ಬಿ.ಎಸ್ಸಿ, ಬಿಕಾಂ/ಬಿಬಿಎA/ಬಿಬಿಎ ಅಥವಾ ಬಿಸಿಎ, ಬಿಎಸ್ಸಿ(ಕೃಷಿ/ತೋಟಗಾರಿಕೆ/ಸಿರಿಕಲ್ಚರ್), ಬಿವಿಎಸ್‌ಸಿ, ಬಿಎಫ್‌ಎಸ್‌ಸಿ, ಬಿಟೆಕ್.ಡೈರಿ, ಎಂಬಿಬಿಎಸ್, ಬಿಯುಎಂಎಸ್, ಬಿಹೆಚ್‌ಎಂಎಸ್, ಬಿಎಎಂಎಸ್, ಬಿಎಸ್‌ಎಂಎಸ್, ಬಿಎನ್‌ವೈಎಸ್, ಬಿಡಿಎಸ್, ಬಿಪಿಟಿ, ಬಿಫಾರ್ಮ್ ಪದವಿಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸುವರ್ಣ ಮಹೋತ್ಸವ ಪಾರಿತೋಷಕ ಹಾಗೂ ಸಂಸ್ಕೃತ ಅಥವಾ ಯಾವುದೇ ವಿಷಯದಲ್ಲಿ ಎಂಎ, ಎಂಕಾಂ ಅಥವಾ ಎಂಸಿಎ/ ಎಂಎಸ್ಸಿ/ ಎಂಬಿಎ/ ಎಂಟೆಕ್ ಅಥವಾ ಎಂಇ/ ಎಂಫಾರ್ಮ್/ ಸಿಎ/ ಇಂಜಿನಿಯರಿಂಗ್/ ಎಂಎಸ್/ ಪಿಹೆಚ್‌ಡಿ ಪದವಿಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಜ್ರ ಮಹೋತ್ಸವ ಪಾರಿತೋಷಕ ನೀಡಿ ಗೌರವಿಸಲಾಗುತ್ತದೆ.


ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆಯಲ್ಲಿ ರಾಜ್ಯಮಟ್ಟ, ರಾಷ್ಟ್ರ ಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪುರಸ್ಕಾರ ಪಡೆದಿರುವ ಕ್ರೀಡಾಪಟುಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಗುತ್ತದೆ.

ಆಸಕ್ತರು ಅ.31 ರೊಳಗೆ ಅರ್ಜಿಯೊಂದಿಗೆ ಅಂಕಪಟ್ಟಿಯ ಮೂಲಕ ಪ್ರತಿ ನಕಲನ್ನು ಸಂಘದ ಶಾಖೆಗಳಿಗೆ ಅಥವಾ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಮಾಮ್‌ಕೋಸ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *