ಶಿವಮೊಗ್ಗದಲ್ಲಿ RSSನ ಶತಮಾನೋತ್ಸವದ ಆಚರಣೆಯ ಹಿನ್ನಲೆಯಲ್ಲಿ ಗಣವೇಶಧಾರಿಗಳ ಅದ್ದೂರಿ ಪಥಸಂಚಲನ ನಡೆಸಿದರು.  ನಗರದ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಫ್ರೀಡಂ‌ಪಾರ್ಕ್ ನ ವರೆಗೆ ಪಥ ಸಂಚಲನ ನಡೆಯಿತು.

ಅಲ್ಲಲ್ಲಿ ಗಣವೇಷಧಾರಿಗಳು ನಡಧು ಬಂದ ರೂಟ್ ಮಾರ್ಚ್ ನಲ್ಲಿ ರಂಗೋಲಿ ಬಿಡಿಸುವುದು. ನೀರು ಹಾಕಿ ಹೂವಿನ ಗುಚ್ಚ ಹಾಕುವ ಮೂಲಕ ಸ್ವಾಗತಿಸಲಾಗಿದೆ. ಮಹಿಳೆಯರು ಗಣವೇಶ ಧಾರಿಗಳಿಗೆ ಆರತಿ ಬೆಳಗಿ ಪಥಸಂಚಲನಕ್ಕೆ ಚಾಲನೆ ನೀಡಿದರು. ಪಥಸಂಚಲನವು ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿಬಜಾರ್ ಮುಖ್ಯ ರಸ್ತೆ, ಶಿವಪ್ಪ ನಾಯಕ ವೃತ್ತ, ಎಎ ವೃತ್ತ, ನೆಹರು ರಸ್ತೆ, ಟಿ. ಸೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ, ಜೈಲ್ ರಸ್ತೆ ಮೂಲಕ ಕೊನೆಗೆ ಅಲ್ಲಮಪ್ರಭು ಮೈದಾನ ತಲುಪಿತು.

ಫ್ರೀಡಂ ಪಾರ್ಕ್ ಗೆ ಗಣವೇಷಧಾರಿಗಳು ಪ್ರವೇಶಿಸಿದಂತೆ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ ತಿಪ್ಪೇಸ್ವಾಮಿ ರವರು ಸ್ವಯಂಸೇವಕರನ್ನು ಕುರಿತು ಮಾತನಾಡಿ ಸಣ್ಣದಾಗಿ ಹುಟ್ಟಿದ RSS ಇಂದು ದೊಡ್ಡದಾಗಿ ಬೆಳೆದಿದೆ‌. 100 ವರ್ಷ ಪೂರೈಸಿದೆ ಎಂದರು.ಸಂಘದ ಆರಂಭದಲ್ಲಿ ಆಸ್ಮಿತೆಯಾದ ಹಿಂದೂ ಎಂದು ಹೇಳಲು ನಮ್ಮಲ್ಲಿ ಸಂಕುಚಿತ ಭಾವನೆಯಿತ್ತು. ಹಿಂದೂ ಎನ್ನಲು ಮಾನಸಿಕತೆಯಿತ್ತು. ಇಂದು ಸಣ್ಣ ಬಾಲಕ ಗರ್ವದಿಂದ ಹೇಳ್ತಾನೆ ನಾನೊಬ್ಬ ಹಿಂದೂ ಎಂದು ಅದಕ್ಕೆ ಸಂಘದ ಕಾಣಿಕೆ ಬಹಳ ದೊಡ್ಡದು ಎಂದರು.

ಸಂಘ ಶತಮಾನ ಪೂರೈಸಿದ ಹಿನ್ನಲೆಯಲ್ಲಿ ಈ ವರ್ಷ ಪೂರ್ತಿ ಯೋಜನೆಯನ್ನ ರೂಪಿಸಲಾಗಿದೆ. ಡಿಸೆಂಬ್ 7 ರಿಂದ 28 ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಂಘದ ವಿಚಾರ ತಿಳಿಸಬೇಕು. ರಾಷ್ಟಜಾಗರಣ ಸಂದರ್ಭದಲ್ಲಿ ರಾಜ್ಯ 29 ಸಾವಿರ ಗ್ರಾಮಗಳನ್ನ ಭೇಟಿ ಮಾಡಲಾಗಿದೆ ಅಯೋಧ್ಯದಲ್ಲಿ ರಾಮಮಂದಿರ ನಿರ್ಮಾಣದ ವೇಳೆ ಅಕ್ಷತ ಕಾಳು ವಿತರಿಸಲು ಈ ಮನೆಗಳನ್ನ ಮುಟ್ಟಲಾಗಿತ್ತು. ಅದರಂತೆ ಈ ಬಾರಿ ಪುಸ್ತಕ ಹಂಚಲು ಅನುಸರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಸಂಸದರಾದ ಬಿ ವೈ ರಾಘವೇಂದ್ರ  ಶಾಸಕರಾದ ಚೆನ್ನಿ. ಡಾ.ಧನಂಜಯ್ ಸರ್ಜಿ, ಡಿಎಸ್ ಅರುಣ್, ಪ್ರಮುಖರಾದ ಸಿದ್ದರಾಮಣ್ಣ ಗಿರೀಶ್ ಪಟೇಲ್ ಪಟ್ಟಾಭಿರಾಮ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *