ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಸದಸ್ಯರೊಂದಿಗೆ ಮಹಾನಗರ ಪಾಲಿಕೆ ಆಯುಕ್ತರದ  ಮಾಯಣ್ಣ ಗೌಡ ಅವರೊಂದಿಗೆ ಸಮಾಲೋಚನ ಸಭೆ ನಡೆಸಿದರು.

ಮಹಾನಗರ ಪಾಲಿಕೆ ಪರಿಷತ್ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರಿಂದ ಹಳೆಯ ವಿದ್ಯುತ್ ಕಂಬಗಳನ್ನು ತೆಗೆಯುವುದು ಹಾಗೂ ನಗರದಲ್ಲಿ ಬಾಯಿ ತೆರೆದು ಜನರ ಪ್ರಾಣ ತೆಗೆಯಲು ಕಾಯುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಆಯುಕ್ತರಾದ ಕೆ‌. ಮಾಯಾಣ್ಣ ಗೌಡ ರವರನ್ನು ಆಗ್ರಹಿಸಿದರು.

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರವು, ವಿನೋಬ ನಗರದಲ್ಲಿರುವ ತಮ್ಮ ಕಚೇರಿಯ ಪಕ್ಕದ ರಸ್ತೆಯಲ್ಲಿ ಮಹಾನಗರ ಪಾಲಿಕೆಯಿಂದ ಯಾವುದೇ ಪರವಾನಗಿ ಪಡೆಯದೆ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಲು ತೀವ್ರ ಒತ್ತಾಯ ಮಾಡಲಾಯಿತು.

ಇ-ಅಸ್ಥಿ ಬಗ್ಗೆ ತೆರಿಗೆ ಪಾವತಿದಾರರ ಸಾರ್ವಜನಿಕ ಸಭೆಯನ್ನು ಮಾಡುವಂತೆ ಒತ್ತಾಯಿಸಲಾಯಿತು.

ನಗರದಲ್ಲಿನ ರಸ್ತೆ ಗುಂಡಿಗಳ ಬಗ್ಗೆ ಈಗ ಮಳೆ ಬಹುತೇಕ ನಿಂತಿದೆ, ವಾಹನಗಳಲ್ಲಿ ಚಲಿಸಲು ನಮಗೆ ಕಷ್ಟವಾಗುತ್ತಿದೆ ಮತ್ತು ಇದಕ್ಕೆ ಗಮನ ಕೊಡದಿದ್ದರೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ, ಪಾಲಿಕೆ ನಗರದಾದ್ಯಂತ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು,

ರಸ್ತೆ ಹಂಪ್‌ ಗಳು ಶಿವಮೊಗ್ಗದಲ್ಲಿ “ಇಂಡಿಯನ್ ರೋಡ್ ಕಾಂಗ್ರೆಸ್” ನೀಡಿದ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ರಸ್ತೆ ಹಂಪ್‌ ಗಳನ್ನು ನಿರ್ಮಿಸಬೇಕೆಂದು
ಒತ್ತಾಯಿಸಿದರು.

ರಸ್ತೆಯ, ಅಕ್ಕಪಕ್ಕದಲ್ಲಿ ಪಾದಚಾರಿಗಳ ದಾರಿಯನ್ನು ಅತಿಕ್ರಮಣ ಮಾಡಿರುವ ಅಂಗಡಿ ಮುಗ್ಗಟ್ಟುಗಳನ್ನು , ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿರುವ ವ್ಯಾಪಾರಗಳು ತೆರವುಗೊಳಿಸಿ. ಗುರುತಿನ ಚೀಟಿ ನೀಡಿ ವ್ಯಾಪಾರಕ್ಕೆ ಅವಕಾಶ ಕೊಟ್ಟವರಿಗೆ ಎಷ್ಟು ಅಳತೆಯ ಜಾಗ ನೀಡಲಾಗಿದೆ, ತಾವು ನೀಡಿದ ಅಳತೆಯ ಮಿತಿ ಮೀರಿದವರ ಮೇಲೆ ಕ್ರಮ ಯಾಕಿಲ್ಲ, ಸಾಮಾನ್ಯ ವ್ಯಕ್ತಿಯು ಮಳಿಗೆಯ ಒಂದು ಅಡಿ ಮುಂದೆ ಬಂದರೆ ಜೆಸಿಬಿ ಯಿಂದ ಪುಡಿ ಪುಡಿ ಮಾಡುವಿರಿ, ಪುಟ್ ಪಾತ್ ಆಕ್ರಮಣಕಾರರ ಮೇಲೆ ಕ್ರಮ ಯಾವಾಗ ಕೈ ಗೊಳ್ಳುತ್ತಿರಿ ನಾಗರೀಕ ವೇದಿಕೆ ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಅಧ್ಯಕ್ಷರುಳರಾದ ಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆವಿ ವಸಂತ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ ಎ ಸತೀಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಕುಮಾರ್, ಸತ್ಯನಾರಾಯಣ್, ಸೀತಾರಾಮ್, ರಾಜು, ನಾಗರಾಜ್, ಸ್ವಾಮಿ, ವಿನೋದ್ ಪೈ, ಕೋಟೆ ರಾಜು, ಲೋಕೇಶ್, ಚನ್ನವೀರಪ್ಪ ಗಾಮನಗಟ್ಟಿ, ಪ್ರಕಾಶ್, ಮಹಾನಗರ ಪಾಲಿಕೆ ಸಿಬ್ಬಂದಿ ವರ್ಗದವರು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *