ಮೈಸೂರು CIPET ವತಿಯಿಂದ “ಮೆಷಿನ್ ಆಪರೇಟರ್ & ಪ್ರೋಗ್ರಾಮರ್ – CNC ಮಿಲ್ಲಿಂಗ್” ವಿಷಯದಲ್ಲಿ ಪಿಯುಸಿ, ಐಟಿಐ, ಡಿಪ್ಲೊಮಾ/ಪದವಿ ವಿದ್ಯಾಭ್ಯಾಸ ಹೊಂದಿರುವವರಿಗೆ ಅ.23 ರಿಂದ 3 ½ ತಿಂಗಳ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY 4.0) ಅಡಿ ಉಚಿತ ಆಹಾರ ಹಾಗೂ ವಸತಿ ಸೌಲಭ್ಯದೊಂದಿಗೆ ಆಯೋಜಿಸಲಾಗಿದೆ.
ಮೈಸೂರು – ಕೇಂದ್ರ ಪೆಟ್ರೋಕೆಮಿಕಲ್ಸ್ ಇಂಜಿನಿಯರಿAಗ್ & ಟೆಕ್ನಾಲಜಿ ಸಂಸ್ಥೆ (CIPET) ಒಂದು ರಾಷ್ಟ್ರೀಯ ಮಟ್ಟದ ಸಂಸ್ಥೆ ಆಗಿದ್ದು, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ, ರಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯ, ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪೆಟ್ರೋಕೆಮಿಕಲ್ಸ್, ಪ್ಲಾಸ್ಟಿಕ್ಸ್ ಮತ್ತು ಪಾಲಿಮರ್ ಸಂಬAಧಿತ ಕೈಗಾರಿಕೆಗಳಿಗೆ ವಿಶ್ವದಾದ್ಯಂತ ಕೌಶಲ್ಯಯುತ ತಾಂತ್ರಿಕ ಸಿಬ್ಬಂದಿಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಈ ತರಬೇತಿಗೆ ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ಕ್ಯಾಂಪಸ್ ನೇಮಕಾತಿಯ ಮೂಲಕ ಉದ್ಯೋಗಾವಕಾಶದ ಖಚಿತತೆ ನೀಡಲಾಗುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ರೂಪಿಸಿಕೊಳ್ಳಲು ಇದು ಯುವಜನರಿಗೆ ಅತ್ಯುತ್ತಮ ಅವಕಾಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ CIPET: CSTS, Mysuru 437/O, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೈಸೂರು – 570016, ದೂರವಾಣಿ: 9480253024 / 9741719645 ವೆಬ್‌ಸೈಟ್: www.cipet.gov.in. ಗಳನ್ನು ಸಂಪರ್ಕಿಸುವುದು.