ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ…
ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಶಿವಮೊಗ್ಗ ಜಿಲ್ಲಾ ಘಟಕ ವತಿಯಿಂದ ಶಿವಮೊಗ್ಗದ ಸಕ್ರೆ ಬಯಲು ಆನೆ ಬಿಡಾರ ಮತ್ತು ಆನೆಗಳ ವಿಶ್ರಾಂತಿ ತಾಣವಾದ ಸ್ಕ್ರೋಲ್ ಗೆ ಭೇಟಿ ನೀಡಿದರು.
ದಸರಾ ಹಬ್ಬದಲ್ಲಿ ಭಾಗಿಯಾಗಿದ್ದ ಆನೆಗಳ ಆರೋಗ್ಯವನ್ನು ಪರಿಶೀಲಿಸಿ ಮೂಕ ಪ್ರಾಣಿ ಆನೆ ಬಾಲಣ್ಣನ ದುಸ್ಥಿತಿಯನ್ನು ಮನಗಂಡು ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಸಚಿವರ ಆದೇಶದ ಮೇರೆಗೆ ಸುಮಾರು 12 ಕ್ಕೂ ಹೆಚ್ಚು ಪಶು ವೈದ್ಯರು ಶಿವಮೊಗ್ಗ ಸಕ್ರೆ ಬಯಲಿನ ಆನೆಗಳ ವೈದ್ಯಕೀಯ ತಪಾಸಣೆಗೆ ಆಗಮಿಸಿದ್ದರು.
ಸಂಘಟನೆಯು ಮನವಿಯನ್ನು ಮಾಡಿದ್ದು ಆನೆಗಳ ದುಷ್ಥಿತಿಗೆ ಕಾರಣವಾದಂತವರನ್ನು ಕಠಿಣ ಕ್ರಮಕ್ಕೆ ಒಳಪಡಿಸಬೇಕೆಂದು ಮನವಿ ಮಾಡಿದರು.ಹಾಗೆಯೇ ಶಿವಮೊಗ್ಗ ಸಿಎಫ್ಓ ರವರಲ್ಲಿ ಬೆಂಗಳೂರಿನಿಂದ ಬರಬೇಕಾಗಿದ್ದಂತಹ ಉನ್ನತ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ತೆಗೆದುಕೊಂಡು ಅವರು ಬಾರದೇ ಇರುವುದರಿಂದ ಶಿವಮೊಗ್ಗ ಸಿಎಫ್ಓ ರವರ ಬಳಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಯಾವುದೇ ತರಹದ ಗೊಂದಲಗಳಿಗೆ ಅವಕಾಶವನ್ನು ಮಾಡಿಕೊಡದಂತೆ ಸಹಕರಿಸಲು ಸಿಎಫ್ ಓರವರ ಮನವಿಯಂತೆ ಸಂಘಟನೆಯು ಬಿಡಾರದ ಹೊರ ಭಾಗದಲ್ಲಿ ನಿಂತು ವೈದ್ಯಕೀಯ ತಪಾಸಣೆಯನ್ನು ನಡೆಸುತ್ತಿರುವುದನ್ನು ಸಂಪೂರ್ಣವಾಗಿ ಗಮನಿಸಿ ವೈದ್ಯರು ಯಾವುದೇ ಒತ್ತಡ ರಹಿತವಾಗಿ ವರದಿಯನ್ನು ನೀಡಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ರಾಜ್ಯಾಧ್ಯಕ್ಷರಾದಂತಹ ರವಿಪ್ರಸಾದ್ ಎಂ ಮತ್ತು ಜಿಲ್ಲಾ ಅಧ್ಯಕ್ಷರಾದಂತಹ ಮಧುಸೂದನ್ ಎಸ್ಎಂ ರವರು ಹೆಚ್ಚಿನ ತನಿಕೆಗಾಗಿ ನಿವೃತ್ತ ನ್ಯಾಯಾಧೀಶರು ಮತ್ತು ಹಾಲಿ ನ್ಯಾಯಾಧೀಶರ ಸಮಿತಿ ರಚನೆಯಾಗಬೇಕು ವೈದ್ಯರ ಹೇಳಿಕೆಯನ್ನು ಪಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮನವಿಯನ್ನು ಮಾಧ್ಯಮಗಳ ಮುಖಾಂತರ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನೌಲೆ ಶಿವಮೊಗ್ಗ ನಗರ ಘಟಕದ ಅಧ್ಯಕ್ಷರು ಕಾರ್ತಿಕ್ ಪೂಜಾರಿ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಕ್ಷರಾದ ನೂರುಲ್ಲಾ ನಯಾಜ್ ಭರತ್ ಎಸ್ ಪ್ರಶಾಂತ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.