ವಾಣಿಜ್ಯ ಮಳಿಗೆಯ ನಾಮಫಲಕ ಜಾಹೀರಾತು, ಫಲಕ ಶಾಲೆ ಮತ್ತು ಶಾಲಾ ವಾಹನಗಳಲ್ಲಿನ ನಾಮಫಲಕ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಘಟಕ ದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಕನ್ನಡ ನಾಡ ಭಾಷೆ ಎಂದು ಭಾಷಣದಲ್ಲಿ ಮಾತ್ರ ಬೊಗಳೆ ಬಿಡುವ ರಾಜಕಾರಣಿಗಳು ಮತ್ತು ಅದಕ್ಕೆ ತಕ್ಕಂತೆ ವರ್ತಿಸುವ ಅಧಿಕಾರಿಗಳು ಎಲ್ಲಿಯೂ ಕನ್ನಡವನ್ನು ಬಳಸುವಂತೆ ಒತ್ತಾಯ ಪಡಿಸುವುದಾಗಲಿ ಕಾನೂನನ್ನು ಪಾಲಿಸುವುದಾಗಲಿ ಯಾವುದನ್ನು ಮಾಡದೆ ಕನ್ನಡ ಉಳಿವಿಗಾಗಿ ಪತ್ರಗಳ ಸುತ್ತೋಲೆಗಳಲ್ಲಿ ಮಾತ್ರ ಕಾಣುವುದು ವಿಪರ್ಯಾಸದ ಸಂಗತಿಯಾಗಿದ್ದು ನಾಯಕರುಗಳು ತಮ್ಮ ಮಕ್ಕಳನ್ನೇ ಆಂಗ್ಲ ಶಾಲೆಗೆ ಸೇರಿಸುವುದು ತಮ್ಮ ವ್ಯವಹಾರಗಳಲ್ಲಿ ಮತ್ತು ತಮ್ಮ ಸಂಸ್ಥೆಗಳಲ್ಲಿ ಕನ್ನಡ ಬಳಕೆಯನ್ನು ಮಾಡದೆ ಕನ್ನಡ ನಾಡಿಗೆ ಮತ್ತು ಕನ್ನಡಿಗರಿಗೆ ದ್ರೋಹ ಎಸಗುತ್ತಿದ್ದಾರೆ.
ಕನ್ನಡಪರ ಸರ್ಕಾರದ ಆದೇಶಗಳು ಕಾಗದದಲ್ಲೇ ಉಳಿದುಹೋಗಿದೆ.

ಅಂಗಡಿ ಮುಂಗಟುಗಳ ಮುಂದೆ ಶೇಕಡ 60ರಷ್ಟು ಕನ್ನಡ ಭಾಷೆ ಹಾಗೂ ಶೇಕಡ 40ರಷ್ಟು ಅನ್ಯ ಭಾಷೆ ಬಳಸುವಂತೆ ಆದೇಶವಿದ್ದರೂ ಸಹ ಇದನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಇದು ಕನ್ನಡ ನಾಡು ನುಡಿಗೆ ಮಾಡಿದ ದ್ರೋಹವಾಗಿರುತ್ತದೆ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜಾಹೀರಾತು ಫಲಕದಲ್ಲಿ ಪ್ರತಿಷ್ಠಿತ ಶಾಲೆಗಳ ಗೋಡೆ ಬರಹದಲ್ಲಿ ಶಾಲೆಗೆ ಓಡಾಡುವ ವಾಹನಗಳ ಫಲಕದಲ್ಲಿ ಮನೆ ಮನೆಗೆ ಮಾಡುವ ಕಂಪನಿಗಳಲ್ಲಾಗಲಿ ಈ ಕೂಡಲೇ ಕನ್ನಡ ಭಾಷೆಯನ್ನು ಬಳಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.

ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸಂಘಟನೆಯು ಕನ್ನಡ ಕಟ್ಟಾಳುಗಳ ಮುಂದಾಳತ್ವದಲ್ಲಿ ಕನ್ನಡ ಬಳಸದ ಜಾಹೀರಾತು ಬಳಕೆಗಳಿಗೆ ಮಸಿ ಬೆಳೆಯುವುದು ಹಾಗೂ ಶಾಲಾ ವಾಹನಗಳ ಅಡ್ಡ ಹಾಕುವುದು ಅಂತ ಶಾಲೆ ವಿರುದ್ಧ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.


ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಪ್ರಮುಖರಾದ ಎಚ್ಎಸ್ ಆರತಿ ತಿವಾರಿ. ಮಾಲತಿ. ಸಂತೋಷ್.ಜ್ಯೋತಿ. ಗಣೇಶ್. ಪದ್ಮಿನಿ. ಮಂಜುನಾಥ್. ಮಾಲತೇಶ್ ನಾಗರಾಜ್.ಮಹಮದ್ ಶಫಿ.ಕೇಶವ ಜೀವನ್ ಮತ್ತಿತರರು ಇದ್ದರು.