ದೇಶಕ್ಕಾಗಿ ನಾವು ತೀರ್ಥಹಳ್ಳಿ ಸಂಘಟನೆಯ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆಯನ್ನ ಆಯೋಜನೆ ಮಾಡಿಲಾಗಿದೆ…
| ಅಹಂ ಕ್ರತುರಹಂ ಯಜ್ಞಃ ಸ್ವಧಾ ಹಮಹಮೌಷಧಮ್
ಮಂತ್ರೋ ಹಮಹಮೇವಾ ಜ್ಯಮಹಮಗ್ನಿರಹಂ ಹುತಮ್ । ಕೃಷ್ಣನೆಂದರೆ ವಾತ್ಸಲ್ಯ,ಕೃಷ್ಣನೆಂದರೆ ಪ್ರೀತಿ, ಅದರಲ್ಲೂ ಬಾಲ ಕೃಷ್ಣನೆಂದರೆ ಮುದ್ದು, ಹುಟ್ಟುತ್ತಲೇ ಸಮಸ್ಯೆಗಳನ್ನು ಎದುರಿಸುತ್ತಾ, ಅದನ್ನೆಲ್ಲಾ ಗೆಲ್ಲುತ್ತಾ ಬದುಕು ಕಟ್ಟಿಕೊಂಡ ಭಗವಂತ. ಸದಾ ಜಗತ್ತನ್ನು ಕಿರುಬೆರಳಲ್ಲಿ ಕುಣಿಸಿದ ಕೃಷ್ಣನ ಬಾಲಲೀಲೆ ಅಪಾರ..
ಇಂಥಹ ಮುದ್ದು ಕೃಷ್ಣನ ವೇಷದಲ್ಲಿ ಮಕ್ಕಳನ್ನು ನೋಡುವುದೇ ಒಂದು ಆನಂದ…
ಎರಡು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ಆಕರ್ಷಕ ಬಹುಮಾನಗಳನ್ನ ನೀಡಲಾಗುವುದು…
ಕೋವಿಡ್ ಕಾರಣದಿಂದ ಚಿಕ್ಕಮಕ್ಕಳನ್ನ ಒಂದೆಡೆ ಸೇರಿಸುವುದು ಆರೋಗ್ಯದ ದೃಷ್ಟಿಯಿಂದ ಸಮಂಜಸವಲ್ಲವೆಂದು ಅರಿತು ಫೇಸ್ಬುಕ್ ಮುಖಾಂತರ ಈ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿದೆ…
ಆಸಕ್ತರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೃಷ್ಣ ಜನ್ಮಾಷ್ಟಮಿಯ ಈ ಸಂಭ್ರಮದಲ್ಲಿ ನಮ್ಮೊಂದಿಗೆ ಜೊತೆಯಾಗಿ….
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153