ಕೆಲವು ವ್ಯಕ್ತಿಗಳು ಕೇಂದ್ರ/ರಾಜ್ಯ ಸರ್ಕಾರದ ಆಹಾರ ಸುರಕ್ಷತಾಧಿಕಾರಿಗಳೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಚಿಹ್ನೆ, ಸೀಲ್, ಗುರುತುಗಳುಳ್ಳ ವಿಸಿಟಿಂಗ್ ಕಾರ್ಡ್ ಗಳನ್ನು ಬಳಸಿ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಲೈಸೆನ್ಸ್ ತೋರಿಸುವಂತೆ, ತಪಾಸಣೆ ಮಾಡುವುದಾಗಿ, ಆಹಾರ ಮಾದರಿಗಳನ್ನು ಸಂಗ್ರಹಿಸುವುದಾಗಿ ಬೆದರಿಸಿ ಆಹಾರ ಉದ್ದಿಮೆದಾರರಿಂದ ಹಣ ವಸೂಲಿ ಮಾಡುತ್ತಿರುವುದಾಗಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದ್ದು, ಈ ರೀತಿಯಾಗಿ ಹಣ ವಸೂಲಿ ಮಾಡುವವರು ಕಂಡು ಬಂದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತಾಧಿಕಾರಿ ಜಿ.ಹೆಚ್. ಸತ್ಯನಾರಾಯಣ-9008305426, ಆಹಾರ ಸುರಕ್ಷತಾ ಅಧಿಕಾರಿಗಳಾದ ಸೋಮೇಶ ಓಲೇಕಾರ-9901682320, ಶಶಿಕುಮಾರ್ ಟಿ. -9741505993 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಅಂಕಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.