ಬೆಳಗಾವಿ: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೆ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ICSE, CBSE, IB, IGCS ಸೇರಿ ಅಂತರಾಷ್ಟ್ರೀಯ ಶಾಲೆಗಳಲ್ಲಿ ಕಡ್ಡಾಯ ಭಾಷೆ ಕಲಿಕೆ ನಿಯಮ ಜಾರಿ ಮಾಡಿಲ್ಲ. ನಿಯಮಗಳು ಅನೇಕ ಶಾಲೆಗಳು ಜಾರಿ ಮಾಡಿಲ್ಲ. ಸರ್ಕಾರದ ನಿಯಮ ಖಾಸಗಿ ಶಾಲೆಗಳು ಉಲ್ಲಂಘನೆ ಮಾಡಲಾಗಿದೆ. ಶಿಕ್ಷಣ ಇಲಾಖೆ ಕೇವಲ ನೊಟೀಸ್ ಕೊಡಲಾಗಿದೆ. ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಮಾಡಿದರು.

RTE ಅಡಿ ಎರಡು ವರ್ಷಗಳಲ್ಲಿ ದಾಖಲಾತಿ ಕಡಿಮೆ ಆಗಿದೆ. ಖಾಸಗಿ ಶಾಲೆಗಳಲ್ಲಿ 25% ಸೀಟು ಕೊಡಬೇಕು. ಈ ಶಾಲೆಗೆ ಸರ್ಕಾರವೇ ಹಣ ಕೊಡಲಿದೆ. ಕಳೆದ 2 ವರ್ಷಗಳಲ್ಲಿ ದಾಖಲಾತಿ ಯಾಕೆ ಕಡಿಮೆ ಆಯ್ತು ಅಂತ ಪ್ರಶ್ನೆ ಮಾಡಿದರು.

ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ಯಾವುದೇ ಶಾಲೆ ಆದರು ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ. ಕನ್ನಡ ಭಾಷೆ ಕಡ್ಡಾಯವಾಗಿ ಕಲಿಸಬೇಕು. ಕನ್ನಡ ಕಲಿಸದೇ ಹೋದ್ರೆ ಅಂತಹ ಶಾಲೆ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸೋಫಿಯಾ ಶಾಲೆಯ ಮೇಲೆ ಆರೋಪ ಬಂದಾಗ ತನಿಖೆ ಮಾಡಿಸಿದ್ದೆವು. ನಮ್ಮ ಗಮನಕ್ಕೆ ಇಂತಹ ಲೋಪ ಕಂಡು ಬಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಶಾಲೆ ಮೇಲೆ ದೂರು ಬಂದರೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಕನ್ನಡ ಕಲಿಕೆ ಆಗುತ್ತಿದೆಯಾ ಇಲ್ಲವಾ ಎಂದು ಮತ್ತೆ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

RTE ನಿಯಮದ ಅನ್ವಯ ದಾಖಲಾತಿ ಮಾಡ್ತಾ ಇದ್ದೇವೆ. ಸರ್ಕಾರಿ ಶಾಲೆ ಇಲ್ಲದೆ ಹೋದ್ರೆ ಮಾತ್ರ ಖಾಸಗಿ ಶಾಲೆಗೆ ಸೇರಿಸಬೇಕು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಕೊಡುತ್ತಿದ್ದೇವೆ. ಎಲ್‌ಕೆಜಿ-ಯುಕೆಜಿ ಸರ್ಕಾರಿ ಶಾಲೆಗಳಲ್ಲಿ ಬರ್ತಿದೆ. ಸರ್ಕಾರ ಕೆಪಿಎಸ್ ಶಾಲೆಗಳನ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಉತ್ತಮ ವ್ಯವಸ್ಥೆ ಇದೆ. ಹೀಗಾಗಿ ಎಲ್ಲರಿಗೂ ನಮ್ಮ ಸರ್ಕಾರಿ ಶಾಲೆಗಳಿಗೆ ದಾಖಲಾತಿಗೆ ಸಹಕಾರ ಕೊಡಿ. RTE ಹಣ ಬಿಡುಗಡೆ ಆಗದೇ ಇದ್ದರೆ ಅದು RR ಸಮಸ್ಯೆ ಇರುತ್ತದೆ. ಅದನ್ನ ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದರು.

Leave a Reply

Your email address will not be published. Required fields are marked *