ಡಿ. 12 ರಂದು ಬೆಳಗ್ಗೆ 11.11ಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಪಿಂಚಣೆ ಅದಾಲತ್ ಹಾಗೂ ಮಧ್ಯಾಹ್ನ ಜಿಪಿಎಫ್ ಅದಾಲತ್ ಕಾರ್ಯಕ್ರಮವನ್ನು ವೆಬೆಕ್ಸ್ ಮೂಲಕ ಹಮ್ಮಿಕೊಳ್ಳಲಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಪಿಂಚಣಿದಾರರು ಡಿ.26 ರಂದ ಬೆಳಗ್ಗೆ 11.00ಕ್ಕೆ ಎ.ಸಿ.ಕಚೇರಿ, ಕೆ-ಸ್ವಾನ್ ವಿ.ಸಿ. ಸಭಾಂಗಣದಲ್ಲಿ ಹಾಜರಾಗಿ ರಾಜ್ಯ ಸೇವಾ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದ ತಮ್ಮ ಕುಂದು ಕೊರತೆಗಳನ್ನು ತಿಳಿಸಬಹುದಾಗಿದೆ. ಅಥವಾ ಜಿಲ್ಲಾ ಖಜಾನೆಯ ಉಪನಿರ್ದೇಶಕರಿಗೆ ಮುಂಚಿತವಾಗಿ ವಿವರಗಳನ್ನು ನೀಡಬಹುದಾಗಿದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.