ಮಹಿಳೆಯೊಬ್ಬರು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಅನಾರೋಗ್ಯದ ಕಾರಣ ದಾಖಲಾಗಿದ್ದು, ಮಹಿಳೆಯು ದಾಖಲಾಗುವ ಸಂದರ್ಭದಲ್ಲಿ ತನ್ನ ಹೆಸರನ್ನು ತಿಳಿಸದೇ ಕೇವಲ ಊರು ಮೈಸೂರು ಎಂದು ಹೇಳಿದ್ದು, ನಂತರ ಮಹಿಳೆಯು ಅದೇ ದಿನ ಉಸಿರಾಟದ ತೊಂದರೆಯಿಂದ ಮೃತ ಪಟ್ಟಿರುತ್ತಾರೆ.

ಮೃತೆಯ ವಾರಸುದಾರರ ಬಗ್ಗೆ ಪರಿಶಿಲಿಸುವಾಗ ಯಾವುದೇ ಕುರುಹುಗಳು ಲಭ್ಯವಿರುವುದಿಲ್ಲ, ನಂತರ ಮೃತೆಯ ಹತ್ತಿರವಿದ್ದ ಚೀಟಿಯಲ್ಲಿ ಬರೆದಿರುವ ಫೋನ್ ನಂಬರ್ ಗೆ ಕರೆ ಮಾಡಿ ವಿಚಾರ ತಿಳಿಸಿದಾಗ, ಆಕೆಯ ಮಗಳು ಪತ್ತೆಯಾಗಿದ್ದು, ನಂತರ ಮೃತೆಯ ಬಳಿ ಇದ್ದ 34,400/- ರೂ ನಗದು ಹಣ ಹಾಗೂ ಒಂದು ಕೊರಳು ಚೈನ್ ಮತ್ತು 02 ಉಂಗುರಗಳನ್ನು ಮೃತೆಯ ಮಗಳಿಗೆ ಹಸ್ತಾಂತರಸಿರುತ್ತದೆ.

ಶ್ರೀ ಚೌಡಪ್ಪ ಕಮತರ, ಸಿಪಿಸಿ ಶಿವಮೊಗ್ಗ ಎ ಉಪ ವಿಭಾಗ, ರವರು ಅನಾಮಧೇಯ ಮಹಿಳೆಯ ವಾರಸುದಾರರನ್ನು ಪತ್ತೆ ಮಾಡಿ, ಉತ್ತಮ ಕರ್ತವ್ಯವನ್ನು ನಿರ್ವಹಿಸಿದ್ದು, ಸದರಿಯವರ ಕರ್ತವ್ಯ ನಿಷ್ಠೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಿ ಅಭಿನಂದಿಸಿರುತ್ತದೆ.