ಭಾರತೀಯರ ಶ್ರಾವಣ ಮಾಸದ ಹುಣ್ಣಿಮೆಯಂದು ಯಜುರ್ ಉಪಾಕರ್ಮ ಎಂದು ಹಿಂದಿನಿಂದ ಆಚರಿಸುತ್ತಾರೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ ರಕ್ಷಾಬಂಧನ” ಅಥವಾ ರಾಖಿ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಎಲ್ಲರೂ ಯಾವ ಜಾತಿ ಭೇದವಿಲ್ಲದೇ, ಎಲ್ಲಾ ಧರ್ಮಿಯರು ಆಚರಿಸುವ ಹಬ್ಬ ಇದಾಗಿದೆ.ಅಣ್ಣ ತಂಗಿಯರ ಬಾಂಧವ್ಯವನ್ನು ಪತ್ರಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಹಬ್ಬ ಇದಾಗಿದೆ.ರಕ್ಷಾಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ.ಈ ಹಬ್ಬದ ಸುತ್ತ ಹಲವಾರು ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ಒಮ್ಮೆ ಇಂದ್ರನ ಅಮರಾವತಿಯ ಮೇಲೆ ರಾಕ್ಷಸನೊಬ್ಬ ದಾಳಿ ಮಾಡಿದಂತೆ.ಆಗ ಇಂದ್ರನ ಪತ್ನಿ ಶಚಿದೇವಿಯು ಸಹಾಯಕ್ಕಾಗಿ ವಿಷ್ಣುವಿನ ಮೊರೆ ಹೋದಾಗ, ವಿಷ್ಣು ಶಚಿದೇವಿಗೆ ಒಂದು ಹತ್ತಿಯ ದಾರವನ್ನು ನೀಡಿ ಅದನ್ನು ಪೂಜೆ ವ್ರತಗೈದು ಇಂದ್ರನ ಕೈಗೆ ಕಟ್ಟುವಂತೆ ಹೇಳಿದರಂತೆ.ಆಕೆ ಹಾಗೆಯೇ ಮಾಡಿದಾಗ, ಇಂದ್ರನು ರಾಕ್ಷಸ ನನ್ನು ಯುದ್ಧದಲ್ಲಿ ಸೋಲಿಸಿದನಂತೆ.ಅಂದಿನಿಂದ ರಕ್ಷಣೆಯ ಪ್ರತೀಕವಾಗಿ, ರಕ್ಷಾಬಂಧನ ಪರಿಕಲ್ಪನೆಯು ಆರಂಭವಾಯಿತು ಎಂಬ ಪ್ರತೀತಿ.ಹೀಗೆ ರಕ್ಷಾಬಂದನಕ್ಕೆ ಸಂಬಂಧಿಸಿದಂತೆ ಇನ್ನು ಹಲವು ಐತಿಹಾಸಿಕ ಕಥೆಗಳೂ ಇವೆ.

ರಕ್ಷಾ ಬಂಧನ ‘ ರಕ್ಷೆ'(ರಕ್ಷಣೆ) ಹಾಗೂ ಬಂಧನ ( ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ.ಪ್ರಸ್ತುತ, ಈ ಹಬ್ಬವು ಸಹೋದರ- ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧನವನ್ನು ಬಲಪಡಿಸುವ ಉತ್ಸವವಾಗಿದೆ.ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ.ಪ್ರತಿಯೊಬ್ಬ ಸಹೋದರನೂ ತನ್ನ ಸಹೋದರಿಯ ರಕ್ಷಣೆ ತನ್ನದೆಂದು ಭ್ರಾತೃತ್ವದ ಪ್ರೇಮವನ್ನು, ಮೆರೆಸುವ ಹಬ್ಬ ರಕ್ಷಾಬಂಧನದ್ದಾಗಿದೆ.ಇದು ದೂರದಲ್ಲಿರುವ ಕುಟುಂಬ ಸದಸ್ಯರನ್ನು ಒಂದಾಗಿಸುತ್ತದೆ.ದೂರದಲ್ಲಿರುವವರ ನಡುವೆ ಬಂಧನ ಬೆಸೆಯುತ್ತದೆ.ರಕ್ಷಾಬಂಧನ ಎಂಬುದು ತಂಗಿಗೆ ಅಣ್ಣನೆಡೆಗಿನ ಕಾಳಜಿಯನ್ನು ಹೊರಹಾಕುವ ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ ದಿನ.ಅಕ್ಕ ತಂಗಿಯರು, ಸಹೋದರರಿಗೆ ರಾಖಿ ಕಟ್ಟಿದ ಬಳಿಕ ಸಿಹಿಯನ್ನು ವಿನಿಮಯ ಮಾಡಿಕೊಂಡು..ಉಡುಗೊರೆಯನ್ನು ಪಡೆದುಕೊಳ್ಳುವುದು ರೂಢಿಯಲ್ಲಿದೆ.ಇಂತಹ ಸಹೋದರತೆಯ ಬಾಂಧವ್ಯಕ್ಕೆ ಒಡಹುಟ್ಟಿದವರೆ ಆಗಬೇಕೆಂದಿಲ್ಲ.ಈ ಸ್ಥಾನವನ್ನು ತುಂಬುವ ಎಲ್ಲರೂ ಸಹೋದರರು ಆಗುತ್ತಾರೆ.ನಮ್ಮ ದೇಶದ ಗಡಿ ಕಾಯುವ ಸೈನಿಕರಿಗೂ ಈ ದಿನ ರಾಖಿಯನ್ನು ಕಟ್ಟಿ ಸಿಹಿ ತಿನ್ನಿಸಿ,ರಕ್ಷಾಬಂಧನವನ್ನು ಆಚರಿಸಲಾಗುತ್ತದೆ.ನಮ್ಮ ದೇಶದ ಯೋಧರಿಗೆ ಹಲವು ಕಡೆಗಳಿಂದ ರಾಖಿ ಯನ್ನು ಕಳುಹಿಸಿಕೊಡಲಾಗುತ್ತದೆ.ಅವರಿಗೆ ಸದಾ ಶ್ರೀರಕ್ಷೆ ಸಿಗಲಿ ಎಂದು.

ತಂಗಿ ಕಟ್ಟುವ ರಾಖಿಗೆ ಕೈಯೊಡ್ಡಿ ಸಂಭ್ರಮಿಸುತ್ತಿರುವ …
ದೂರದಲ್ಲಿರುವ ತಂಗಿ ಕಳುಹಿಸುವ ರಾಖಿಗಾಗಿ ಹಂಬಲಿಸುತ್ತಿರುವ..
ಅಣ್ಣ ಕೊಡಬಹುದಾದ ಉಡುಗೊರೆಗಾಗಿ ಕಾಯುತ್ತಿರುವ..
ಸಂತಸದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿರುವ ….ಎಲ್ಲರಿಗೂ ನೂಲು ಹುಣ್ಣಿಮೆಯ ಹಾಗೂ ರಕ್ಷಾಬಂಧನದ ಶುಭಾಶಯಗಳು.
ಈ ಕರೊನಾದ ಸಂಧಿಗ್ದ ಪರಿಸ್ಥಿತಿಯಲ್ಲಿ ಹಬ್ಬವನ್ನು ಜಾಗ್ರತೆಯಿಂದ ,ಸರಳವಾಗಿ ಆಚರಿಸೋಣ..ಸುರಕ್ಷಿತವಾಗಿರೋಣ.ನಮಗಾಗಿ…ನಮ್ಮವರಿಗಾಗಿ.

ಲೇಖನ : ಅನಿತಾ ಕೃಷ್ಣ
ಶಿಕ್ಷಕಿ ,ತೀರ್ಥಹಳ್ಳಿ

CCTV SALES & SERVICE

9880074684

                      
               

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153