ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಮಕ್ಕಳು ದೇಶದ ಸಂಪತ್ತು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು,ಶರಾವತಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಮಧು ಬಂಗಾರಪ್ಪನವರು ಹೇಳಿದರು.ನಗರದ ಗಾಡಿಕೊಪ್ಪದಲ್ಲಿರುವ ಶರಾವತಿ ಎಜುಕೇಷನ್ ಟ್ರಸ್ಟಿನ ಮಲ್ನಾಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶಾಲಾ‌ ಶಿಕ್ಷಣ ಇಲಾಖೆಯಲ್ಲಿ 46 ಸಾವಿರ ಸರ್ಕಾರಿ ಶಾಲೆ,16 ಸಾವಿರ ಅನುದಾನಿತ ಶಾಲೆ,76 ಸಾವಿರ ಅನುದಾನ ರಹಿತ ಶಾಲೆಗಳಿವೆ.ಒಟ್ಟು 1 ಕೋಟಿ 16 ಲಕ್ಷ ಮಕ್ಕಳಿಗೆ ಸೇವೆ ಮಾಡುವ ಅವಕಾಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನನಗೆ ನೀಡಿದ್ದಾರೆ.ಇದು ನನ್ನ ಭಾಗ್ಯ ಎಂದರು.
ಬಹಳ ದೊಡ್ಡ ಹಾಗೂ ಬಹು ಮುಖ್ಯವಾದ ಇಲಾಖೆ.ದೇಶದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.


ಮಲ್ನಾಡ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ.ಪೋಷಕರು ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ ತಮ್ಮ ಮಕ್ಕಳನ್ನು ಮಲ್ನಾಡ್ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿಸುವ ಮೂಲಕ
ಭವಿಷ್ಯವನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿಯನ್ನು ನೀಡಿದ್ದೀರಿ.ನಮ್ಮ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಮಕ್ಕಳಿಗೆ ಶಿಕ್ಷಣ ಯಾವತ್ತೂ ರಿಚೇಬಲ್ ಆಗಿರಬೇಕು.ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ದೃಷ್ಟಿಯಿಂದ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.


ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೋಗ ರಿಸರ್ಚ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಯೋಗಿ ದೇವರಾಜ್, ಶಿವಗಂಗಾ ಯೋಗ ಕೇಂದ್ರದ ರುದ್ರ ಆರಾಧ್ಯರರು ಶರಾವತಿ ಡೆಂಟಲ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಶ್ರೀನಿಧಿ , ಮಲ್ನಾಡ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಕುಮಾರಿ ನಿಶಾ.ಬಿ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *