ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಡು ಕಂಡ ಅಪ್ರತಿಮ ಹೋರಾಟಗಾರ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದ ಸ್ವತಂತ್ರ ಹೋರಾಟಗಾರರಲ್ಲ ನಮ್ಮ ನಾಡು ದೇಶಕ್ಕೋಸ್ಕರ ಹೋರಾಡಿ ಜೀವತೆತ್ತ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ತೆರವುಗೊಳಿಸಿರುವುದಕ್ಕೆ ವಿದ್ಯಾರ್ಥಿ ಸಂಘಟನೆಯ ವಿರೋಧವಿದೆ.ರಾಯಣ್ಣ ಬ್ರಿಗೇಡ್ ಎಂದು ಸಂಘಟನೆ ಮಾಡಿದ್ದ ಮಾನ್ಯ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಮೌನ ವಹಿಸಿರುವುದು ಸೂಕ್ತವಲ್ಲ ಮಾನ್ಯ ಶಿವಮೊಗ್ಗ ಜಿಲ್ಲೆಯ ಸಂಸದರು ಪುತ್ಥಳಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಮಾನ್ಯ ಉಸ್ತುವಾರಿ ಸಚಿವರು ಹಾಗೂ ಸಂಸದರು ಸರ್ಕಾರದ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಪಡೆದು ಗೌರವಯುತವಾಗಿ ಪುತ್ಥಳಿ ಮರು ಪ್ರತಿಷ್ಠಾಪನೆ ಮಾಡಬೇಕು ಇಲ್ಲವಾದಲ್ಲಿ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಪುತ್ಥಳಿ ವಿಚಾರದಲ್ಲಿ ಜಾತಿ, ಧರ್ಮ, ರಾಜಕೀಯ, ತಂದಿದ್ದೇ ಆದರೆ ಮಾಜಿ ಸಚಿವ ಹಾಗೂ ಮಾಜಿ ಸಂಸದರಾಗಬೇಕಾಗುತ್ತದೆ ಎಂದು ವಿದ್ಯಾರ್ಥಿ ಸಂಘಟನೆ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ