ಶಿವಮೊಗ್ಗ ಬಸ್ಟಾಂಡ್ ಹಿಂಭಾಗ ಸಂತೆ ಮೈದಾನದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗುವಂತೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಪಾಲಿಕೆ ಅಧಿಕಾರಿಗಳು ಅವರನ್ನ ಅ ಸ್ಥಳದಿಂದ ಒಕ್ಕಲೆಬ್ಬಿಸಲು ಹೊರಟ ವಿಷಯವನ್ನು ಅಧ್ಯಕ್ಷರ ಗಮನಕ್ಕೆ ಬಂದ ಕೂಡಲೇ ಅ ಸ್ಥಳಕ್ಕೆ ಭೇಟಿ ನೀಡಿದ ಚನ್ನವೀರಪ್ಪ ಗಾಮನಗಟ್ಟಿ ರವರು ಮೊದಲು ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟಗಳನ್ನು ಕೇಳಿದರು. ವ್ಯಾಪಾರಿಗಳು ವಾರದಲ್ಲಿ ಒಂದೇ ದಿನ ಸಂತೆ ನಡೆಯುವ ದಿನ ಮಾತ್ರ ವ್ಯಾಪಾರ ಮಾಡಬೇಕು ದಿನನಿತ್ಯ ಈ ಸ್ಥಳಗಳಲ್ಲಿ ವ್ಯಾಪಾರ ಮಾಡಬಾರದು ಎನ್ನುತ್ತಿರುವರು ನಮ್ಮ ಮನೆಗಳು ಇದೆ ಅಕ್ಕಪಕ್ಕದ ಏರಿಯಗಳಲ್ಲಿ ಇದೆ ನಾವು ಈ ಸ್ಥಳಗಳಲ್ಲಿ ದಿನನಿತ್ಯ ವ್ಯಾಪಾರ ಮಾಡುತಿರುವೆವೂ ಈಗ ನಮ್ಮ ಎಲ್ಲ ಸರಕು ಸಾಮಗ್ರಿಗಳನ್ನು ಎತ್ತಿಕೊಂಡು ಹೋಗುತ್ತೇವೆ ಎನ್ನುತ್ತಿರುವರು ಎಂದರು.
ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ವಿಕಾಸ್ ರವರನ್ನು ಇದರ ಬಗ್ಗೆ ಮಾಹಿತಿ ಕೇಳಿದಾಗ ಇವರು ರಸ್ತೆ ತುಂಬಾ ತಾಡಪಾಲ್ ಹಾಕಿ ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ವ್ಯಾಪಾರ ಮಾಡುತ್ತಿರುವ ಬಗ್ಗೆ ಪಾಲಿಕೆ ಸದಸ್ಯರಿಂದ ಹಾಗೂ ಹಲವರಿಂದ ದೂರುಗಳು ಬಂದಿವೆ, ಬೀದಿ ವ್ಯಾಪಾರಿಗಳ ಮೇಲೆ ಬಸ್ ಹರಿದು ಮೃತಪಟ್ಟವರು ಉಂಟು ಹಾಗಾಗಿ ಸ್ಥಳೀಯ ದೇವಸ್ಥಾನದ ಕಮಿಟಿಯವರಿಂದಲ್ಲೂ ದೂರುಗಳು, ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಕಸದ ರಾಶಿಗಳ ಘಂಟೆ ಗಾಡಿಗೆ ಕೊಡದೆ ಎಲ್ಲೆಂದರಲ್ಲಿ ಎಸೆಯುವರು ಇದರ ಬಗ್ಗೆ ಅನೇಕ ದೂರುಗಳು ಬಂದಿವೆ ಇದರ ಬಗ್ಗೆ ಟಿವಿಸಿ ಕಮಿಟಿಯ ಗಮನಕ್ಕೂ ತರಲಾಗಿದೆ. ಅದರ ಅನ್ವಯ ಅವರನ್ನ ಒಕ್ಕಲೆಬ್ಬಿಸಲು ಮುಂದಾಗಿರುವೆವೂ ಎಂದರು.
ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಒಕ್ಕಲೇಸಬೇಡಿ ಅವರು ಬಡವರಿರುವರು ಈ ವ್ಯಾಪಾರವೇ ಅವರ ಜೀವನ ನಿರ್ವಹಣೆಗೆ ದಾರಿ ಎಂದು ಸಂಚಾರಕ್ಕೆ ತೊಂದರೆ ಅಗದ ರೀತಿ ವ್ಯಾಪಾರ ಮಾಡುವರು ಎಂದು ತಿಳಿಸಿದರು. ಬೀದಿ ಬದಿ ವ್ಯಾಪಾರಿಗಳು ಕಾನೂನು ಚೌಕಟ್ಟಿನಲ್ಲಿ ವ್ಯಾಪಾರಕ್ಕೆ ನೀಡುವ ಅಳತೆ ಮೀರಬಾರದು ಎಂದು ಹೇಳಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆಯ ಬಾಕ್ಸ್ ಅಳತೆ ಜಾಗದ ಗುರುತು ಮಾಡಿ ಅಲ್ಲೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಯಿತು. ವ್ಯಾಪಾರ ಮಾಡುವಾಗ ಬೀದಿ ಬದಿ ಗುರುತಿನ ಚೀಟಿ ಇರಬೇಕು.ನಿಮ್ಮ ವ್ಯಾಪಾರದ ಅಳತೆ ಮೀರದಂತೆ ವ್ಯಾಪಾರ ಮಾಡಿ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ AEE (ಪರಿಸರ) ಅಮೋಘ ಎಸ್ ಕವಲಗಿ, ದೊಡ್ಡಪೇಟೆ ಪೊಲೀಸ್ ಇಲಾಖೆಯ PSI ಮಂಜುಳಮ್ಮ, ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ಮೂಹಿದ್ದಿನ್, ಪಾಲಿಕೆ ಸಿಬ್ಬಂದಿಗಳು ಸ್ಥಳೀಯ ನಾಗರಿಕರು, ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153