ನಮ್ಮ ರಾಜ್ಯದಲ್ಲಿ ಔರಾದ್ಕರ್ ವರದಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ವಿಚಾರವಾಗಿ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಪೊಲೀಸರಿಗೆ ನಮ್ಮ ರಾಜ್ಯದ ಪೊಲೀಸರಿಂದಲೂ ಅತಿಹೆಚ್ಚು ಸಂಬಳ ಹಾಗೂ ಭತ್ಯೆ ವಿವಿಧ ವಸತಿ ಸಾಧ್ಯತೆಗಳೇ ಹೆಚ್ಚು ಇದೆ. ಅನೇಕ ವರ್ಷಗಳಿಂದ ಔರಾದ್ಕರ್ ವರದಿ ಜಾರಿಯಾಗುವ ಬಗ್ಗೆ ಯಾವ ಸರ್ಕಾರಗಳು ಕೂಡಾ ಸಮರ್ಪಕವಾಗಿ ಕ್ರಮ ತೆಗೆದುಕೊಂಡಿರುವುದಿಲ್ಲ ಆದ್ದರಿಂದ ಮಾನ್ಯ ಗೃಹ ಮಂತ್ರಿಗಳಾದ ತಾವುಗಳು ವರದಿಯನ್ನು ರಾಜ್ಯದಲ್ಲಿ ಸಮಪರ್ಕವಾಗಿ ಜಾರಿಗೆ ತಂದ ನಮ್ಮ ರಾಜ್ಯದ ಪೊಲೀಸರಿಗೆ ಅನುಕೂಲ ಮಾಡಿಕೊಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಉತ್ತಮ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಾವೆ. ಕರ್ನಾಟಕ ರಾಜ್ಯ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ 2016 ರಲ್ಲಿ ಆದೇಶಿಸಿದೆ ಆದರೂ ಕೂಡ ಮದ್ಯದಂಗಡಿಗಳನ್ನು ಅಬಕಾರಿ ಇಲಾಖೆ ಇಲ್ಲಿಯವರೆಗೂ ಕೂಡ ಸ್ಥಳಾಂತರಿಸುವುದಿಲ್ಲ. ರಾಜ್ಯದಲ್ಲಿ ಅಬಕಾರಿ ನಿಯಮಗಳ ಉಲ್ಲಂಘನೆ ಮಾಡುತ್ತಿರುವುದು ಅಬಕಾರಿ ಅಧಿಕಾರಿಗಳಿಗೆ ತಕ್ಷಣ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.ಹಾಗೂ ಡೈರಿ ಸರ್ಕಲ್ ನಲ್ಲಿರುವ 2 ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂಬ ತಮ್ಮನ್ನು ಕೇಳಿಕೊಳ್ಳುತ್ತೇವೆ.ಸರ್ಕಾರಕ್ಕೆ ಕೊಡುವ ತೆರಿಗೆಯಿಂದಲೂ ಕೂಡ ವಿನಾಯ್ತಿಯನ್ನು ಪಡೆದುಕೊಳ್ಳುತ್ತೇವೆ. ಈ ಕಂಪನಿಯಲ್ಲಿ ಸಾಲ ತೆಗೆದುಕೊಂಡು ಮಹಿಳೆಯರು ಕೊರನಾ ಕೆಲಸವಿಲ್ಲದೆ ಸಾಲ ಮರು ಪಾವತಿಸಲು ತಡವಾದರೆ ಮೈಕ್ರೋ ಫೈನಾನ್ಸ್ ರವರು ಹಗಲು ರಾತ್ರಿ ಎನ್ನದೆ ಮನೆ ಬಾಗಿಲಿಗೆ ಬಂದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಇಂತಹ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ತಿಳಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ