ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿಎಸ್ ಬಿ ಆರ್ ಮೂರ್ತಿ ಅಪ್ಪೆಮಿಡಿ ಮಾವಿನಕಾಯಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಬಿಡುಗಡೆ ಸಮಾರಂಭವು ಪ್ರೆಸ್ ಟ್ರಸ್ಟ್ ನಲ್ಲಿ ನಡೆಯಿತು.ಇದು ಭೌಗೋಳಿಕ ಪ್ರದೇಶ ಬೆಳೆಗೆ ಕೊಟ್ಟ ಗೌರವವಾಗಿದೆ. ಕೇವಲ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಕೂಡ ಅಪ್ಪೆಮಿಡಿ ಮಾವಿನಕಾಯಿ ಮಹತ್ವ ತಿಳಿಯುತ್ತದೆ ಇದರಿಂದ ರೈತರಿಗೂ ಕೂಡ ಅನುಕೂಲವಾಗುತ್ತದೆ ಈ ಭಾಗದ ರೈತರ ಬಹುದಿನದ ಕನಸು ಇದಾಗಿತ್ತು ಈಗ ಅಂಚೆ ಇಲಾಖೆ ಅದನ್ನು ನನಸು ಮಾಡಿದೆ.ಅಪ್ಪೆಮಿಡಿ ಮಾವಿನಕಾಯಿ ಸಾಗರ ಮತ್ತು ಸುತ್ತಮುತ್ತಲ ಪ್ರದೇಶದ ವಿಶೇಷ ಬೆಳೆಯಾಗಿದೆ ನೂರಾರು ವರ್ಷಗಳಿಂದ ಇದನ್ನು ಬೆಳೆಯುತ್ತಿದ್ದಾರೆ. ಒಬ್ಬ ಉದ್ಯಮಿಯಾಗಿ ಅಪ್ಪೆಮಿಡಿಯನ್ನು ಪರಿಚಯಿಸಬೇಕು ಎನ್ನುವ ದೃಷ್ಟಿಯಿಂದ ಕಳೆದ ಹಲವಾರು ವರ್ಷಗಳಿಂದ ಅಂಚೆ ಇಲಾಖೆ ಮೂಲಕ ಪ್ರಯತ್ನಿಸಲಾಗಿತ್ತು ನಮ್ಮ ಹೋರಾಟದ ಫಲವಾಗಿ ಈಗ ಪ್ರಾದೇಶಿಕ ಮಹತ್ವ ಸಿಕ್ಕು ಅಂಚೆ ಇಲಾಖೆ ತಮ್ಮ ವಿಶೇಷ ಅಂಚೆ ಲಕೋಟೆ ಯಲ್ಲಿ ಬಿಡುಗಡೆ ಮಾಡುವುದು ಹೆಮ್ಮೆಯ ವಿಷಯವಾಗಿದೆ.ಮಾವು ಎಂಬುದೇ 1ವಿಶಿಷ್ಟವಾದ ಫಲವಾಗಿದೆ ಅದರಲ್ಲಿ ಅಪ್ಪೆಮಿಡಿ ಬಹಳ ವಿಶೇಷವಾದುದು ಇದರಲ್ಲಿ ಹಲವಾರು ತಳಿಗಳಿದ್ದು ಇದರಲ್ಲಿ ಅದರ ಹೆಸರು ಕೂಡ ಬೆಳೆಯುವ ಪ್ರದೇಶದ ಊರಿನೊಂದಿಗೆ ಸೇರಿಕೊಂಡಿರುವುದು ವಿಶೇಷವಾಗಿದೆ ಈಗ ಇದು ಲಾಭದಾಯಕ ಬೆಳೆಯೂ ಆಗಿದೆ ಇದರ ರುಚಿ ಆಕಾರ ಗಾತ್ರ ಸುವಾಸನೆ ಎನ್ನುವ ಅತ್ಯಂತ ರುಚಿಕರವಾಗಿದ್ದು ಇಂತಹ ಬೆಳೆಯನ್ನು ಅಂಚೆ ಇಲಾಖೆ ವಿಶೇಷ ಲಕೋಟೆ ಯಲ್ಲಿ ಬಿಡುಗಡೆ ಮಾಡಿರುವುದು ಸಂತೋಷದ ವಿಷಯವಾಗಿದೆ. ಅಂಚೆ ಇಲಾಖೆ ಮೂಲಕ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ