ಕೆರೆಯಲ್ಲಿ ಕಲ್ಯಾಣಿ ಅಭಿವೃದ್ಧಿ ಹೆಸರಿನಲ್ಲಿ ಸೂಕ್ತ ಭದ್ರತೆ ಗಳಿಲ್ಲದೆ ಕೆಲಸ ಮಾಡುತ್ತಿದ್ದ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಮುಗ್ಧ ಬಾಲಕನೊಬ್ಬನ ಪ್ರಾಣ ಹೋಗಿರುವ ಘಟನೆ ಕಾಶೀಪುರದ ಕಟ್ಟೆ ಸುಬ್ಬಣ್ಣ ಕಾಂಪ್ಲೆಕ್ಸ್ ಹತ್ತಿರದಲ್ಲಿ ನಡೆದಿದೆ. ಮೃತ ಬಾಲಕನನ್ನು ಗಾಡಿಕೊಪ್ಪದ ನಿವಾಸಿ ಸಂದೇಶ ಎಂದು ಗುರುತಿಸಲಾಗಿದೆ. ಸಂದೇಶ್ ಅವರು ಆಟೊ ಚಾಲಕರಾದ ಕುಮಾರ್ ಅವರ ಮಗನಾಗಿದ್ದು ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿ ಓದುತ್ತಿದ್ದ.
ನೀರು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಇನ್ನೂ ಮುಗ್ಧ ಮಕ್ಕಳು ನೀರನ್ನು ನೋಡಿದ ತಕ್ಷಣ ನೀರಿನಲ್ಲಿ ಆಟವಾಡುವ ಬಯಕೆ ಆಗುವುದು ಸಹಜ. ಇಂಥದ್ದೊಂದು ಬಯಕೆಯಿಂದ ಗಾಡಿಕೊಪ್ಪದ ಬಾಲಕನೋರ್ವ ತನ್ನ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ. ಇಲ್ಲಿ ಗುತ್ತಿಗೆದಾರನ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಸೂಕ್ತ ಕ್ರಮಗಳನ್ನು ಕೈಗೊಂಡು ಫೆನ್ಸಿಂಗ್ ಗಳನ್ನು ಮಾಡಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಗುತ್ತಿಗೆದಾರ ನಾಗಿದ್ದವನು ಮಾಡಿದ್ದರೆ ಇಂದು 1ಜೀವ ಉಳಿದಿತ್ತು. ಇದು ಅಭಿವೃದ್ಧಿಯ ಹೆಸರಿನಲ್ಲಿ ಮುಂಚೂಣಿಯಲ್ಲಿರುವ ಶಿವಮೊಗ್ಗಕ್ಕೆ ಕಪ್ಪುಚುಕ್ಕೆಯೇ ಸರಿ. ಇ ಟೆಂಡರ್ ಆದ ತಕ್ಷಣ ಗುತ್ತಿಗೆದಾರರು ತಾವೇ ಸರ್ವಾಧಿಕಾರಿಯಂತೆ ಯಾವುದೇ ನಿಯಮಗಳನ್ನು ಪಾಲಿಸದೆ ಕೆಲಸ ಮಾಡುತ್ತಾರಲ್ಲ ? ಇವರ ಮೇಲಿರುವ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿರಲು ಕುರುಡು ಕಾಂಚಾಣವೇ ಕಾರಣವಿರಬಹುದೇ ?. ಏನೇ ಆಗಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಕೆಲಸ ತಾವು ಪ್ರಾಮಾಣಿಕವಾಗಿ ಮಾಡಿದಲ್ಲಿ ಇಂಥ ಸಾವು ನೋವುಗಳ ಪ್ರಮಾಣ ಕಮ್ಮಿಯಾಗಬಹುದಾ ?
ಟೀಮ್ ಪ್ರಜಾಶಕ್ತಿ