ತೀರ್ಥಹಳ್ಳಿಯಲ್ಲಿ ಕೊರೋನ ಸೋಂಕಿತರ ಸೇವೆಗಾಗಿ “ದೇಶಕ್ಕಾಗಿ ನಾವು ಸಂಘಟನೆ”
ತೀರ್ಥಹಳ್ಳಿ : ಕೊರೋನ ಒಬ್ಬೊಬ್ಬರಿಗೆ ಒಂದೊಂದು ತರಹ ಕಾಡುತ್ತಿದೆ. ಹೆಚ್ಚಾಗಿ ಜೀವವನ್ನೇ ಕಸಿದುಕೊಳ್ಳುತ್ತಿರುವ ಈ ವೈರಾಣು ಇನ್ನೊಬ್ಬರನ್ನ ಮತ್ತೊಬ್ಬರನ್ನ ಮುಟ್ಟದಂತೆ ಅಸ್ಪೃಶ್ಯತೆಯನ್ನೂ ಕಲಿಸುತ್ತಿದೆ.
ತೀರ್ಥಹಳ್ಳಿಯಲ್ಲಿ ದೃಶ್ಯಗಳೇ ವಿಭಿನ್ನವಾಗಿ ಕಾಡುತ್ತಿದೆ. ಜೆಸಿ ಆಸ್ಪತ್ರೆಯಿಂದ ಹೊರಬರುವ ರೋಗಿಗಳನ್ನ ಇತರೆ ವಾಹನಗಳಲ್ಲಿ ಕೂರಿಸಿಕೊಳ್ಳಲು ಒಪ್ಪುತ್ತಿಲ್ಲ. ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.
ಇದಕ್ಕಾಗಿ ನಾಲ್ಕೈದು ಜನರ ಯುವಕರ ತಂಡ ಇಂತಹ ರೋಗಿಗಳನ್ನ ನಿಗದಿತ ಸ್ಥಳಕ್ಕೆ ಸಾಗಿಸಲು ದೇಶಕ್ಕಾಗಿ ನಾವು ಎಂಬ ಹೆಸರಿನ ಅಡಿಯಲ್ಲಿ ಸಂಘಟನೆಯೊಂದು ಮುಂದೆ ಬಂದಿದೆ.
ಕೊರೋನಾ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಮನೆಗೆ ಕರೆದೊಯ್ಯುವಾಗ ಬೇರೆ ವಾಹನ ಇರುವವರು ಬರಲು ಒಪ್ಪುತ್ತಿಲ್ಲ.
ಹಾಗೆಯೇ ಅತೀ ಅರೋಗ್ಯ ಸಮಸ್ಯೆ ಇರುವವರನ್ನೂ ಆಸ್ಪತ್ರೆಗೆ ದಾಖಲಿಸಲೂ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಘಟನೆಗೆ ಒಂದು ಕರೆ ಮಾಡಿದರೆ ಸಕಾಲದಲ್ಲಿ ಸೇವೆ ನೀಡಲು ದೇಶಕ್ಕಾಗಿ ನಾವು ಸಂಘಟನೆ ಸಿದ್ದವಿದೆ.
ಯಾವುದೇ ಸಂದರ್ಭದಲ್ಲಿ ವಾಹನದ ವ್ಯವಸ್ಥೆ ಮಾಡುತ್ತಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡಬೇಕಾದ ಸಂಖ್ಯೆಗಳು.
ಪೂರ್ಣೇಶ್ ಕೆಳಕೆರೆ-9113289757
ಆದರ್ಶ್ ಹುಂಚದಕಟ್ಟೆ-9731658179
ಸುಭಾಷ್ ಕುಲಾಲ್-9632383105.
ಪ್ರೇಮಾ ಅರಳಸುರಳಿ-8277844664
prajashakthi.in