ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪರವರು ಇಂದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಯಿಯವರನ್ನು ‌ಭೇಟಿ ಮಾಡಿ ಗಾಂಧಿ ಕಥನ ಪುಸ್ತಕವನ್ನು ನೀಡಿ ಅಭಿನಂದಿಸಲಾಯಿತು.ಈ ಸಂಧರ್ಭದಲ್ಲಿ ರೈತರ ಆಶಾಕಿರಣವಾದ ಯಶಸ್ವಿನಿ ಯೋಜನೆಯಿಂದ ಸಾಕಷ್ಟು ಬಡ ರೈತರಿಗೆ ಅನುಕೂಲವಾಗಿತ್ತು. ಆದ್ದರಿಂದ ಯಶಸ್ವಿನಿ ಯೋಜನೆಯನ್ನು ಮುಂದುವರಿಸವಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ನದಿಯಿಂದ 12.5TMC ತುಂಗಾ ನದಿಯಿಂದ 17.4TMC ನೀರೆತ್ತಿ ಕೊಡಲು DPR ಆಗಿ ಕಾಮಗಾರಿ ಪ್ರಗತಿಯಲ್ಲಿದೆ, ಆದರೆ ಭದ್ರಾ ಅಣೆಕಟ್ಟು ನಿರ್ಮಾಣವಾಗಿ 58 ವರ್ಷಗಳಲ್ಲಿ ಕೇವಲ 23 ಬಾರಿ ತುಂಬಿದೆ. ಬರಗಾಲದ ಬೇಸಿಗೆಯ ವರ್ಷಗಳಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಜನ-ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲದೆ, ತೋಟಗಳು ಸಹ ಒಣಗಿ ಹೋಗಿ ಬೆಳೆದು ನಿಂತ ಮರಗಳನ್ನು ಕಡಿಯುವಂತ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಆದ್ದರಿಂದ ಭದ್ರಾ ನದಿಯಿಂದ 12.5TMC ನೀರೆತ್ತವ ಬದಲಾಗಿ ತುಂಗಾ ನದಿಯಿಂದಲೇ ಸಂಪೂರ್ಣ 29.9 TMC ನೀರನ್ನು ತುಂಗಾ ನದಿಯಿಂದಲೇ ನೀರೆತ್ತಲು ಹೊಸದಾಗಿ DPR ಮಾಡಿ ಆದೇಶ ಹೊರಡಿಸಬೇಕಾಗಿ ಕೋರಿದರು. ಜೊತೆಗೆ ರೈತರಿಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸಗಳು ಆಗದೆ ತಿಂಗಳುಗಟ್ಟಲೇ ಅಲೆದಾಡುವತಾಂಗಿದೆ ಹಾಗೂ ರೈತರ ಇನ್ನೂ ಅನೇಕ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153