ದೇಶಕಂಡ ದೂರದರ್ಶಿತ್ವವನ್ನು ಹೊಂದಿದ್ದ ಧೀಮಂತ ಶಕ್ತಿ ಡಾ. ಸರ್. ಎಂ. ವಿಶ್ವೇಶ್ವರಯ್ಯನವರು, ಈ ದೇಶಕಂಡ ಆಧುನಿಕ ಯಂತ್ರ ಮಾನವ ಸರ್. ಎಂ. ವಿ. ಯವರು. ದೇಶಕಟ್ಟುವ, ಜೊತೆಗೆ ಅಭಿವೃದ್ದಿಯ ಕಾಯಕದಲ್ಲಿ ಮೌನಕ್ರಾಂತಿಯ ಹರಿಕಾರರು ಎಂದು ಹಿರಿಯ ಅಭಿಯಂತರಾದ ಶ್ರೀಯುತ ಬಾರಂದೂರು ಪ್ರಕಾಶ್‌ರವರು ನುಡಿದರು. ಅವರು ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಇಂಜಿನಿರ‍್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಿವಮೊಗ್ಗ ಜಿಲ್ಲೆಗೆ ಅವರ ಸರ್ವಾಂಗೀಣ ಕೊಡುಗೆ ಅವಿಸ್ಮರಣೀಯ. ಅವರ ಭದ್ರ-ಬುನಾದಿ ಯೋಜನೆಗಳು ಇಂದು ಸರಿಯಾಗಿ ಸದ್ಭಳಕೆಯಾಗುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ಅವರ ಕಾರ್ಯ ಸೇವಾ ಬದ್ದತೆ, ಅವರು ನೀರಾವರಿ, ಕೃಷಿ, ವಿದ್ಯುತ್, ಕೈಗಾರಿಕಾ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಯೋಜನೆಗಳು ಅವಿಸ್ಮರಣೀಯ. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಜೆ.ಆರ್. ವಾಸುದೇವರವರು ವಹಿಸಿ ಮಾತನಾಡುತ್ತಾ ವಿಶ್ವೇಶ್ವರಯ್ಯನವರ ಅಪಾರ ಯೋಜನೆ, ಸೇವೆಗಳು ಇಂದಿನ ಪೀಳಿಗೆಗೆ ದಾರಿಧೀಪವಾಗಿದೆ. ವಿಶ್ವೇಶ್ವರಯ್ಯನವರ ಯೋಜನೆಗಳಲ್ಲಿ ಕೇವಲ ೧೦% ಅಳವಡಿಸಿಕೊಂಡರೆ ನಮ್ಮ ದೇಶ ಸುಭೀಕ್ಷವಾಗಿರುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಎಫ್.ಕೆ.ಸಿ.ಸಿ.ಐ ಆಡಳಿತ ಮಂಡಳಿ ಸದಸ್ಯರಾದ ಡಿ.ಎಂ. ಶಂಕರಪ್ಪರವರು ಮಾತನಾಡುತ್ತಾ ಸರ್. ಎಂ. ವಿಯವರ ವಾಣಿಜ್ಯ ಕೃಷಿ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಿಂದ ಹೆಚ್ಚು ಉತ್ಪಾದನೆ ಸಾದಿಸಲು ಸಾದ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಎಸ್. ಎಸ್. ಉದಯಕುಮಾರ, ಪಿ. ರುದ್ರೇಶ್, ಕಾರ್ಯದರ್ಶಿಗಳಾದ ಬಿ. ಆರ್. ಸಂತೋಷ್, ಬಿ. ಗೋಪಿನಾಥ್, ಖಜಾಂಚಿಗಳಾದ ಜಿ.ಎನ್. ಪ್ರಕಾಶ್, ನಿರ್ಧೇಶಕರುಗಳಾದ ಎಂ. ರಾಜು, ಜಿ. ವಿಜಯಕುಮಾರ್, ಎ.ಎಂ ಸುರೇಶ್, ಡಿ.ಪಿ. ಸಂದೀಪ್, ಮಧುಸೂದನ ಐತಾಳ್, ವಸಂತ್ ಹೋಬಳಿದಾರ್, ಮಾಜಿ ಅಧ್ಯಕ್ಷರುಗಳಾದ ಎಂ. ಭಾರದ್ವಾಜ್, ಆಶ್ವತ್ ನಾರಾಯಣ ಶೆಟ್ಟಿ, ಕೆ.ವಿ. ವಸಂತ್‌ಕುಮಾರ್, ಹಲವಾರು ಸಂಘ-ಸಸ್ಥೆಗಳ ಪಧಾಧಿಕಾರಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153