ಪ್ರಧಾನಿ ಮೋದಿ ಒಬ್ಬ ಪುಣ್ಯಾತ್ಮ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯ ರಾಘವೇಂದ್ರ ಬಣ್ಣಿಸಿದರು. ಅವರು ಇಂದು ಬಿಜೆಪಿ ಕಚೇರಿಯಲ್ಲಿ ಮೋದಿಯವರ 71 ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ ವಿಶೇಷ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ಮೋದಿ ಪ್ರಧಾನಿಯಾಗಿರುವುದುಬಹುಜನರ ತಪಸ್ಯೆ ಎಂದು ನಾನು ಭಾವಿಸಿದ್ದೇನೆ ಅವರು ಪ್ರಧಾನಿಯಾದ ಮೇಲೆ ಬದಲಾವಣೆಗಳ ಮಹಾಪೂರವೇ ಆಗಿದೆ ಅಭಿವೃದಿಟಛಿಗೆ ಬಹಳ ಮುಖ್ಯವಾಗಿ ಶ್ರೀರಾಮ ಮಂದಿರ ನಿರ್ಮಾಣ ಕಾಶ್ಮೀರದಲ್ಲಿ ಉಗ್ರರ ಭಯ ತಪ್ಪಿದ್ದು 370ನೇ ವಿಧಿ ತೆಗೆದು ಹಾಕಿದ್ದು ಮತ್ತು ಅಭಿವೃದ್ಧಿಗೆ ಒತ್ತು ಕೊಟ್ಟಿದ್ದು ಕೊರೋನಾ ದಂತಹ ಸಂದರ್ಭದಲ್ಲಿ ಜಗತ್ತೇ ಅಚ್ಚರಿ ಪಡುವಷ್ಟು ಉಚಿತವಾಗಿ ಲಸಿಕೆ ನೀಡಿರುವುದು ಇವೆಲ್ಲವೂ ಅವರ ಆಡಳಿತದಲ್ಲಿ ಒಂದು ವಿಸ್ಮಯವನ್ನೆ ಮೂಡಿಸಿದೆ ಹಾಗಾಗಿ ಮೋದಿ ಒಬ್ಬ ಸಂತ ಎಂದರು. ಮೋದಿಯವರ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಕಾಂಗ್ರೆಸ್ ನವರು ವಿನಾಕಾರಣ ದೂಷಣೆ ಮಾಡುತ್ತಿದ್ದಾರೆ ರಾಹುಲ್ ಗಾಂಧಿಯವರಂತೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯವರದ್ದು ನಾಟಕದ ಹಿಂದುತ್ವ ಎಂದು ಹೇಳಿದ್ದಾರೆ ಈ ದೇಶದ ಜನರಿಗೆ ಯಾರು ನಾಟಕ ಮಾಡುತ್ತಾರೆ ಎಂದು ಗೊತ್ತಿದೆ ಅಧಿಕಾರ ಕಳೆದುಕೊಂಡು ಹಪಹಪಿಸುತ್ತಿರುವ ಕಾಂಗೆ ತಿರುಕನ ಕನಸು ಕಾಣುತ್ತಿದೆ ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯುವುದನ್ನು ಅವರ ಕೈಲಿ ಸಹಿಸಲು ಆಗುತ್ತಿಲ್ಲ ಎಂದರು ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಇಂದು ಇಡೀ ದಿನ ಕಾರ್ಯಕ್ರಮ ಆಯೋಜಿಸಿದೆ ಬೆಳಗ್ಗೆ ಗಣಪತಿ ದೇವಾಲಯದಲ್ಲಿ ಅವರ ಜನ್ಮದಿನಕ್ಕೆ ಶುಭಾಶಯ ಕೋರಿ ವಿಶೇಷ ಪೂಜೆ ನೆರವೇರಿಸುವುದರಿಂದ ಹಿಡಿದು ಸಂಜೆಯವರೆಗೆ ಸೇವಾ ಕಾರ್ಯಕ್ರಮಗಳು ಮುಂದುವರಿಯಲಿವೆ ಹಾಗೆಯೇ ಮೋದಿಯವರ ಸಾಧನೆಗಳ ಬಗ್ಗೆ ತಿಳಿಸುವುದು ಮತ್ತು ಕಾರ್ಯಕರ್ತರಲ್ಲಿ ಸಂಘಟನೆ ಮನೋಭಾವ ಬೆಳೆಸುವುದು ಅಭಿವೃದ್ಧಿಯ ಅನುಕರಣೆ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಇಡೀ ಜಿಲ್ಲಾದ್ಯಂತ ಕಾರ್ಯಕ್ರಮ ಮುಂದುವರಿಯಲಿದೆ ಎಂದರು ಕಾರ್ಯಕ್ರಮದಲ್ಲಿ ಸಂಸದ ಬಿವೈ ರಾಘವೇಂದ್ರ ಪ್ರಮುಖರಾದ ಆರ್ ಕೆ ಸಿದ್ದರಾಮಣ್ಣ, ಗಿರೀಶ್ ಪಟೇಲ್, ಜ್ಯೋತಿ ಪ್ರಕಾಶ್, ಎಸ್ ರುದ್ರೇಗೌಡ ,ಪವಿತ್ರಾ, ರಾಮಯ್ಯ, ದತ್ತಾತ್ರಿ ,ಡಿ ಎಸ್ ಅರುಣ್, ಸುನೀತಾ ಅಣ್ಣಪ್ಪ, ಸೇರಿದಂತೆ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ