ಶರಾವತಿ ವಿದ್ಯುತ್ ಯೋಜನೆಗಾಗಿ ಸಾಗರ ಹೊಸನಗರ ತಾಲ್ಲೂಕಿನ ರೈತರು 1ಲಕ್ಷ ಎಕರೆಗೂ ಹೆಚ್ಚು ಭೂಮಿ ಕಳೆದುಕೊಂಡಿದ್ದಾರೆ ಭೂಮಿ ಕಳೆದುಕೊಂಡ 60 ವರ್ಷದವರು ವಿವಿಧ ಪ್ರದೇಶಗಳಲ್ಲಿ ವಾಸಿಸುವವರಿಗೆ ಮನೆ ಜಮೀನಿನ ಹಕ್ಕುಪತ್ರ ಎಲ್ಲರಿಗೂ ಇದುವರೆಗೂ ಕೊಟ್ಟಿರುವುದಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ವಿಧಾನ ಸಭಾಧ್ಯಕ್ಷರು ಕಂದಾಯ ಸಚಿವರೂ ಆಗಿದ್ದ ಕಾಗೋಡು ತಿಮ್ಮಪ್ಪನವರು ಅವಧಿಯಲ್ಲಿ ದಕ್ಷ ಅಧಿಕಾರಿಯಾಗಿ ಹೆಸರು ಗಳಿಸಿದ ಮದನ್ ಗೋಪಾಲ್ ರವರ ಪ್ರಯತ್ನದಿಂದ ಅರಣ್ಯ ಇಲಾಖೆಯು 9600ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿ ಕಂದಾಯ ಇಲಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು ನಂತರ ಮುಳುಗಡೆ ಸಂತ್ರಸ್ತ ರೈತರಿಗೆ ಹಕ್ಕುಪತ್ರ ನೀಡಲು ಆರಂಭಿಸಲಾಯಿತು ಈ ಮಧ್ಯದಲ್ಲಿ ಕೆಲವು ಪ್ರಗತಿ ವಿರೋಧಿಗಳು ಇಂಥ ಬಳಿಯಿಂದ ಡಿನೋಟಿಫಿಕೇಷನ್ ಮಾಡಿದ್ದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು ಹೈಕೋರ್ಟ್ ರಾಜ್ಯಸರ್ಕಾರ ಡಿನೋಟಿಫಿಕೇಷನ್ ಮಾಡಿದ್ದು ಕಾನೂನು ಬಾಹಿರ ಎಂದು ಕಳೆದ ಮಾರ್ಚ್ ತಿಂಗಳಿನಲ್ಲಿ ರದ್ದು ಪಡಿಸಿತ್ತು. ರದ್ದುಪಡಿಸಿ ಈಗ 6ತಿಂಗಳು ಕಳೆದರೂ ನ್ಯಾಯಾಲಯದಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ 1959ರಿಂದ 1969ರವರೆಗೆ ಶರಾವತಿ ಮುಳುಗಡೆ ಸಂತ್ರಸ್ತರ ನೋವಿಗೆ ಅರಣ್ಯ ಇಲಾಖೆ ಜಮೀನು ಹಂಚಿಕೆ ಮಾಡಲು 34ಆದೇಶಗಳನ್ನು ಮಾಡಿದೆ.1980ರಲ್ಲಿ ಅರಣ್ಯ ಸಂರಕ್ಷಣೆ ಕಾಯಿದೆ ಜಾರಿಗೆ ಬಂದಿತ್ತು ಈ ಕಾಯಿದೆ ಜಾರಿ ಬರುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಇರಲಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಸರ್ಕಾರ ಮನವರಿಕೆ ಮಾಡಿಕೊಳ್ಳುವುದರಲ್ಲಿ ವಿಫಲವಾಗಿತ್ತು ಸರ್ಕಾರ ಮೇಲ್ಮನವಿ ಸಲ್ಲಿಸಿ ಡಿನೋಟಿಫಿಕೇಶನ್ ಕ್ರಮಬದ್ಧ ಎಂದು ಆಗದಿದ್ದರೆ ಹಕ್ಕುಪತ್ರ ಪಡೆದ ಖಾತೆ ಮಾರಿಕೊಂಡವರ ಪಹಣಿಯಲ್ಲಿ ಜಮೀನು ಅರಣ್ಯ ಎಂದು ನಮೂದಿಸಲಾಗಿದೆ ಉಳಿದವರಿಗೆ ಹಕ್ಕುಪತ್ರ ಸಿಗದಂತಾಗುತ್ತದೆ ಆದ್ದರಿಂದ ರಾಜ್ಯ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ತಕ್ಷಣ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು ನ್ಯಾಯಾಲಯದಲ್ಲಿ ಸರ್ಕಾರ ಆದೇಶ ಪಡೆದು ರೈತರಿಗೆ ಹಕ್ಕು ಪತ್ರ ಕೊಡುವುದನ್ನು ಮುಂದುವರೆಸಬೇಕು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಮುಳುಗಡೆ ಸಂತ್ರಸ್ತರ ಕೈಗೊಂಡ ನಡವಳಿಕೆಗಳಲ್ಲೂ ಅನುಷ್ಠಾನಗೊಳಿಸಬೇಕು ಕೆಲವು ಅರಣ್ಯಾಧಿಕಾರಿಗಳು ಕೆಲ ನಕಲಿ ಪರಿಸರವಾದಿಗಳು ಎತ್ತಿಕಟ್ಟಿ ನ್ಯಾಯಾಲಯಗಳಲ್ಲಿ ಮಾಹಿತಿ ನೀಡಿ ನ್ಯಾಯಾಲಯಗಳ ಆಗಿ ತಪ್ಪಿಸಿದ್ದು ಮುಳುಗಡೆ ರೈತರನ್ನು ನಕಲಿ ಸರವಾದಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಇವರುಗಳ ಮೇಲೆ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಈ ಎಲ್ಲ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಬೇಕು ಶರಾವತಿ ಮುಳುಗಡೆ ಸಂತ್ರಸ್ತ ಸಮಸ್ಯೆಗಳನ್ನು ವಾಸದ ಮನೆ ಜಮೀನಿನ ಮಾಲೀಕತ್ವ ನೀಡುವ ಕೆಲಸವನ್ನು ಪರಿಹರಿಸಬೇಕು.ಇಲ್ಲವಾದಲ್ಲಿ ಸಂತ್ರಸ್ತೆಯರು ಮುಂದೆ ಕಾನೂನು ಭಂಗ ಚಳವಳಿ ಮಾಡುವುದಾಗಿ ಎಚ್ಚರಿಸುತ್ತೇವೆ .

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ