ಕೋಟೆಗಂಗೂರು ಪೋಸ್ಟ್ ವಿರುಪಿನಕೊಪ್ಪ ಹಸಿರುಗಿಡ ಗ್ರಾಮದವರಾದಂತ ನಾವು ಕೇಳಿಕೊಳ್ಳುವುದೇನೆಂದರೆ ಕಳೆದ 2-3ವರ್ಷಗಳ ಹಿಂದೆ ಕೋಟೆಗಂಗೂರು ನಂದಿ ರಸ್ತೆ ಕಾಮಗಾರಿ ನಡೆಸಿರುತ್ತಾರೆ ಆದರೆ ಹಸಿರು ಗಿಡ ನಿವಾಸಿಗಳ ಕಾಲೋನಿಯಲ್ಲಿ ಯಾವುದೇ ರೀತಿಯ ರಸ್ತೆ ಕಾಮಗಾರಿ ನಡೆಸಿಲ್ಲ ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ಇದ್ದು ಯಾವುದೇ ಟ್ಯಾಂಕ್ ನಿರ್ಮಾಣವಾಗಿಲ್ಲ ಅದರಲ್ಲೂ ಒಳಚರಂಡಿಯ ವ್ಯವಸ್ಥೆಯು ಹದಗೆಟ್ಟಿದೆ ಅದರಂತೆ ಗ್ರಾಮದಲ್ಲಿ ರಸ್ತೆ ಇಲ್ಲದ ಕಾರಣ ಡಾಂಬರೀಕರಣ ವಾಗದ ಕಾರಣ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಸಂಚರಿಸುವ ಮಕ್ಕಳಿಗೆ ವಯಸ್ಕರಿಗೆ ವೃದ್ಧರಿಗೆ ಹಿರಿಯರಿಗೆ ತೊಂದರೆಯಾಗುತ್ತಿದೆ ಈ ಹಿಂದೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಲ್ಲಿ ಕೇಳಿಕೊಂಡರು ಜನಸಾಮಾನ್ಯರ ಜೀವನ ಅನುಕೂಲದ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ವ್ಯವಸ್ಥೆಯ ಬಗ್ಗೆ ನಿರ್ಲಕ್ಷಿಸುತ್ತಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.ಅದೂ ಅಲ್ಲದೆ ಶಾಲೆಗೆ ತೆರಳಲು ಶಿವಮೊಗ್ಗ ನಗರಕ್ಕೆ ಸಂಚರಿಸಲು ಸೂಕ್ತವಾದ ಬಸ್ಸು ನಿಲ್ದಾಣಗಳ ವ್ಯವಸ್ಥೆಯೂ ಇಲ್ಲದಂತಾಗಿದೆ.ಆದ್ದರಿಂದ ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮೂಲಭೂತ ಸೌಕರ್ಯಗಳ ಸಾರ್ವಜನಿಕ ಗ್ರಾಮಸ್ಥರ ಬೇಡಿಕೆಯನ್ನು ಪೂರೈಸುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ