*ಮನೆಯಲ್ಲಿ ಬಾಗಿಲುಗಳಿಗೆ ಹ್ಯಾಂಗಿಂಗ್ ಲಾಕ್ ಡೋರ್ ಲಾಕ್ ಬಳಸುವುದು.

  • ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲು ಗೆ ಸಮಾನ ಪ್ರಾಮುಖ್ಯತೆ ನೀಡಿ ಮನೆಯ ಮುಂಬಾಗಿಲು ಮತ್ತು ಹಿಂಬದಿಯ ಬಾಗಿಲುಗಳಿಗೆ ಕಬ್ಬಿಣದ ಗ್ರಿಲ್ ಗಳನ್ನು ಬಳಸುವುದು.
  • ಮನೆಯ ಬಾಗಿಲು ತಟ್ಟಿದಾಗ ಅಥವಾ ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆಗೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸುವುದು.
  • ಮನೆಯ ಒಳಗಡೆ ರೂಮ್ನಲ್ಲಿ ಮಲಗಿರುವವರು ಕಿಟಕಿ ಬಾಗಿಲು ತೆಗೆದು ಮಲಗಬಾರದು ಮತ್ತು ಕಿಟಕಿ ಬಳಿ ಬೆಲೆಬಾಳುವ ವಸ್ತುಗಳನ್ನು ಇಡುವುದು ತಪ್ಪಿಸಿ.
  • ರಾತ್ರಿ ವೇಳೆಯಲ್ಲಿ ಮನೆ ಖಾಲಿ ಬಿಡದೆ ನಂಬಿಕಸ್ಥರು ಸ್ನೇಹಿತರು ಅಥವಾ ಬಂಧುಗಳು ಮನಗಳು ತಿಳಿಸುವುದು ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಡಬೇಕು.
  • ದಿನ ಪ್ರತಿ ಹಾಲು ಹೂವು ಮತ್ತು ದಿನಪತ್ರಿಕೆಗಳನು ಹಾಕುವವರಿಗೆ ಮನೆಬಿಟ್ಟು ಹೊರಗೆ ಹೋಗುವ ಬಗೆ ಇಳಿಸಬಾರದು.
  • ಮನೆ ಬಿಟ್ಟು ಹೊರಗಡೆ ಹೋಗುವ ಬಗೆ ಸಮೀಪದ ನಂಬಿಕಸ್ಥರಲ್ಲಿ ಮತ್ತು ಸಂಬಂಧಿಕರಲ್ಲಿ ಮಾತ್ರ ತಿಳಿಸುವುದು ಹೆಚ್ಚು ಪ್ರಚಾರ ಮಾಡಬಾರದು.
  • ರಾತ್ರಿ ಹೊತ್ತು ಮನೆಯ ಹೊರಗಡೆ ಲೈಟ್ ಹಾಕುವ ವ್ಯವಸ್ಥೆ ಮಾಡುವುದು ಹಾಗೂ ಸಾಧ್ಯವಾದಷ್ಟು ಸಿಸಿ ಕ್ಯಾಮೆರಾ ಅಳವಡಿಸುವುದು ಮತ್ತು ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ಗೌಪ್ಯ ಸ್ಥಳದಲ್ಲಿ ಸೂಕ್ತ ಭದ್ರತೆಯಲ್ಲಿ ಇಡುವುದು.
  • ಹೆಚ್ಚು ದಿನ ಮನೆಗೆ ಬೀಗ ಹಾಕಿ ಹೊರಗಡೆ ಹೋಗುವ ಸಮಯ ಕಡ್ಡಾಯವಾಗಿ ಬೆಲೆಬಾಳುವ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿರಿಸುವುದು.
  • ನಿಮ್ಮ ಮನೆಯ ಆಸುಪಾಸಿನಲ್ಲಿ ಯಾರಾದರೂ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದ ವಾಹನಗಳು ಕಂಡುಬಂದಲ್ಲಿ ಕೂಡಲೇ 112 ಗೆ ಕರೆ ಮಾಡುವುದು ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
  • ಮನೆಯ ಕಿಟಕಿಗಳಿಗೆ ತಂತಿಯ ಜಾಲರಿಯನ್ನು ಅಳವಡಿಸುವುದು.
  • ನೀವು ಮನೆಯಲ್ಲಿ ಮಲಗುವ ಸಮಯ ಬಾಗಿಲು ಕಿಟಕಿ ಗೇಟ್ ಗಳಿಗೆ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನಃ ಖಚಿತಪಡಿಸಿಕೊಳ್ಳುವುದು.
  • ಮನೆಯ ತಾರಸಿಯ ಮೇಲೆ ಮತ್ತು ಮನೆಯ ಅಂಗಳದಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ.
  • ಅಪರಿಚಿತರು ಮನೆ ಬಳಿ ಬಂದು ನೀರು ವಿಳಾಸ ಇತ್ಯಾದಿ ಕೇಳಲು ಬಂದಾಗ ಅಥವಾ ಮಾರಾಟಗಾರರು ಮನೆಯ ಬಳಿ ಬಂದಾಗ ಆದಷ್ಟು ಜಾಗ್ರತೆಯಿಂದ ವ್ಯವಹರಿಸಿರಿ.
  • ಮನೆಕೆಲಸಕ್ಕೆ ಕೆಲಸದಾಳುಗಳು ಅವರುಗಳಲ್ಲಿ ಮನೆ ಚಿನ್ನಾಭರಣಗಳು ಮನೆಯಲ್ಲಿರುವ ನಗದು ಹಣದ ಬಗ್ಗೆ ವಿನಿಮಯ ಮಾಡಿಕೊಳ್ಳಬೇಡಿ.
  • ಎಮರ್ಜೆನ್ಸಿ ?ಡಯಲ್ ಮಾಡಿ112, 24*7 ಪೊಲೀಸ್ ಅಗ್ನಿ ವಿಪತ್ತು ಯಾವುದೇ ತುರ್ತು ಪರಿಸ್ಥಿತಿ ಇರಲಿ ಒಂದೇ ಸಂಖ್ಯೆ 112.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ