ಅಸ್ಸಾಂ ರಾಜ್ಯದ ದಾರಂಗ್ ಜಿಲ್ಲೆಯ ಗೋರಾಕುತಿ ಎಂಬಲ್ಲಿ ಸುಮಾರು 500 ಕುಟುಂಬಗಳ 8000 ಕ್ಕೂ ಅಧಿಕ ಜನರನ್ನು ಬಲವಂತವಾಗಿ ವಕ್ಕಲೆಬ್ಬಿಸಿ ರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಅಮಾನವೀಯ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಸಲೀಂ ಖಾನ್ ಆರೋಪಿಸಿದ್ದಾರೆ
ಶತಮಾನಗಳಿಂದ ಜೀವಿಸಿಕೊಂಡು ಬರುತ್ತಿದ್ದ ಜನರನ್ನು ಬಾಂಗ್ಲಾ ನುಸುಳುಕೋರರು ಎಂದು ಆಪಾದಿಸಿ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ವಕ್ಕಲೆಬ್ಬಿಸುವ ಪ್ರತಿಕ್ರಿಯೆ ನಡೆಸಿರುವುದನ್ನು ಖಂಡಿಸಿ ನಿವಾಸಿಗಳು ಪ್ರತಿಭಟಿಸಿದರು ಜೀವಿಸುವ ಹಕ್ಕಿಗಾಗಿ ಪ್ರತಿಭಟಿಸಿದ ಬಡ ನಿವಾಸಿಗಳನ್ನು ಗುಂಡಿಕ್ಕಿ ಕೊಂದಿರುವ ಮಾತ್ರವಲ್ಲ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಹೇಮಂತ್ ಹೇಮಂತ್ ಬಿಸ್ವಾ ಶರ್ಮಾ ನಡೆ ಅಮಾನವೀಯ
ಶಸ್ತ್ರ ಸಜ್ಜಿತ ಪೊಲೀಸರು ನಿರಾಯುಧರಾಗಿ ಪ್ರತಿಭಟಿಸಿದ ರೈತ ನಿವಾಸಿಗಳನ್ನು ಸಿಬಿಸಿ ಗುಂಡಿಕ್ಕಿ ಕೊಂದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಹೃದಯ ವಿದ್ರಕವಾಗಿದೆ ಗುಂಡಿಗೆ ಕೊಂದನು ದೇಹದ ಮೇಲೆ ಛಾಯಗ್ರಾಹಕನೊಬ್ಬ ಜಿಗಿದು ಆಕ್ರೋಶಭರಿತರಾಗಿ ಹಲ್ಲೆ ನಡೆಸುವ ಮನೋಸ್ಥಿತಿ ಮುಸ್ಲಿಮರ ವಿರುದ್ಧ ಈ ದೇಶದಲ್ಲಿ ಫಾಸಿಸ್ಥರು ಸಾಮಾನ್ಯ ಜನರ ಮನಸ್ಸಿನಲ್ಲಿ ತುಂಬಿರುವ ವಿಷಬೀಜ ಎಷ್ಟರಮಟ್ಟಿಗೆ ಎಂಬುದನ್ನು ಬಯಲುಗೊಳಿಸುತ್ತದೆ ಘಟನೆಯನ್ನು ಖಂಡಿಸುತ್ತಾ ಸಂತ್ರಸ್ತ ಕುಟುಂಬಗಳಿಗೆ ನಡೆಸಲು ಜಮೀನಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಉಂಟಾದ ನಷ್ಟ ಪರಿಹಾರವನ್ನು ಅಸ್ಲಾಂ ಸರ್ಕಾರ ಭರಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ