ಶಿಕ್ಷಕ ವೃತ್ತಿಯು ಅತ್ಯಂತ ಗೌರವಯುತವಾಗಿದ್ದು, ಉತ್ತಮ ರಾಷ್ಟç ನಿರ್ಮಾಣ ಮಾಡುವ ಕಾರ್ಯದಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿರುತ್ತದೆ ಎಂದು ನಿವೃತ್ತ ಡಿಡಿಪಿಐ ಎನ್.ಎಚ್.ಶ್ರೀಕಾಂತ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ನೇಷನ್ ಬಿಲ್ಡ್ ಅವಾರ್ಡ್ ಪ್ರಶಸ್ತಿ ವಿತರಿಸಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ಒಳ್ಳೆಯ ನಡವಳಿಕೆ ಹೊಂದಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ಹೆಚ್ಚುತ್ತದೆ ಎಂದು ತಿಳಿಸಿದರು.
ಶಿಕ್ಷಕರು ಮಕ್ಕಳಿಗೆ ಪಠ್ಯ ಅಧ್ಯಯನದ ಜತೆಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವಂತೆ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಅಗತ್ಯ ಮಾರ್ಗದರ್ಶನ ನೀಡಬೇಕು. ಮಕ್ಕಳಲ್ಲಿ ರಾಷ್ಟçದ ಪ್ರಗತಿಗೆ ಶ್ರಮಿಸುವಂತಹ ಮನೋಭಾವವನ್ನು ಬೆಳೆಸಬೇಕು. ರಾಷ್ಟçದ ಪ್ರಗತಿಯಲ್ಲಿ ಶಿಕ್ಷಕರು ಮತ್ತು ಉತ್ತಮ ವಿದ್ಯಾರ್ಥಿಗಳ ಪಾತ್ರ ದೊಡ್ಡದಿರುತ್ತದೆ ಎಂದರು.
ಶಿಕ್ಷಕ ವೃತ್ತಿಯ ಜತೆಗೆ ಸಮಾಜಮುಖಿಯಾಗಿ ಸೇವೆ ಸಲ್ಲಿಸಿ ಸಮಾಜ ಕಟ್ಟುವ ಕಾಯಕದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಮೂರು ಜನರ ಶಿಕ್ಷಕರಿಗೆ, ವಿದ್ಯಾರ್ಥಿಗಳಿಂದಲೇ ಆಯ್ಕೆ ಮಾಡಿ ರೋಟರಿಯ ಪ್ರತಿಷ್ಠಿತ ಪ್ರಶಸ್ತಿ “ನೇಷನ್ ಬಿಲ್ಡ್ ಅವಾರ್ಡ್” ಪ್ರಶಸ್ತಿಯನ್ನು ಭಾಗೀರತಿ, ಜಗದೀಶ್ ಹಾಗೂ ಸಿದ್ದಪ್ಪ ಅವರಿಗೆ ಸನ್ಮಾನಿಸಲಾಯಿತು.
ಶಿಕ್ಷಕ ವೃತ್ತಿಯಲ್ಲಿನ ಕೌಶಲ್ಯಗಳು ಹಾಗೂ ಅನುಭವಗಳ ಕುರಿತಾಗಿ ಸನ್ಮಾನಿತರು ಅನಿಸಿಕೆ ಹಂಚಿಕೊAಡರು. ನಿಕಟಪೂರ್ವ ಅಧ್ಯಕ್ಷ ಎಸ್.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಡಿಡಿಪಿಐ ಚಂದ್ರಶೇಖರಯ್ಯ, ಸುಮತಿ, ಡಾ. ಗುಡದಪ್ಪ, ಕುಮಾರಸ್ವಾಮಿ, ಕಾರ್ಯದರ್ಶಿ ಸತೀಶ್, ಬಿಂದು ವಿಜಯ್‌ಕುಮಾರ್, ನಾಗವೇಣಿ, ಎಂ.ಪಿ.ನಾಗರಾಜ್, ಮಲ್ಲಿಕಾರ್ಜುನ ಕಾನೂರು, ಅರುಣ್ ದೀಕ್ಷಿತ್, ಮಹೇಶ್, ಜಿ.ವಿಜಯ್‌ಕುಮಾರ್ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ