01/10/21 ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಮೆಗ್ಗಾನ್ ಆಸ್ಪತ್ರೆಯ ಮುಂಭಾಗ, ಸಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಶಿವಮೊಗ್ಗ ನಗರದ ಬೀದಿ ಬದಿ ವ್ಯಾಪಾರಸ್ಥರು ಸ್ವಚ್ಛತಾ ಸಪ್ತಾಹ ಆಂದೋಲನ ಆರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಬೀದಿ ಬದಿ ವ್ಯಾಪಾರಸ್ಥರು ನಿಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇರಲಿ, ಪುಟ್ ಪಾತ್ ಸಂಪೂರ್ಣ ಆಕ್ರಮಿಸಿಕೊಳ್ಳದೆ ಒಂದು ಬದಿ ಸಾಲಾಗಿ ವ್ಯಾಪಾರ ಮಾಡಿ. ಆಸ್ಪತ್ರೆಯಿಂದ ಬರುವ ಹಿರಿಯರು ಹಾಗೂ ಸಾರ್ವಜನಿಕರಿಗೆ ಅಂತರ ಕಾಪಾಡಲು ಹೇಳಿ, ಟೀ,ಕಾಫಿ ಕುಡಿದ ಲೋಟವನ್ನು ಎಲ್ಲೆಂದರಲ್ಲಿ ಎಸೆಯದೆ ಇಟ್ಟಿರುವ ಕಸದ ಡಬ್ಬಿಗಳಿಗೆ ಹಾಕಲು ಹೇಳಿ ಎಲ್ಲೆಂದರಲ್ಲಿ ಎಸೆದರೆ ಕೈ ಹೊರಸಿದ ಆಳೆ,ಟೀ ಕಪ್ ಗಾಳಿಯಲ್ಲಿ ಹಾರಿ ರಸ್ತೆಯ ಉದ್ದಕ್ಕೂ ಕಸದ ರಾಶಿ ಹರಡುವುದು. ನಿಮ್ಮಲ್ಲಿ ಸಂಗ್ರಹ ವಾಗುವ ಕಸಗಳಾದ ತಿಂಡಿ ತಿನಿಸುಗಳು, ತರಕಾರಿ, ಸೊಪ್ಪು, ಹಾಗೂ ಕುರುಕುರೆ ಪ್ಲಾಸ್ಟಿಕ್ ಕವರ್ ಇನ್ನೂ ಇತರೆ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಘಂಟೆ ಗಾಡಿಗೆ ನೀಡಿ. ತಿಂಡಿ ತಿನಿಸುಗಳ ತಯಾರಿಸುವಾಗ ನೆಪ್ರಾನ್, ಬಾಯಿಗೆ ಮಾಸ್ಕ್, ಕೈಗೆ ಹಾಂಡ್ ಗ್ಲೋಸ್ ಹಾಕಿ. ವೆಜ್ ಮತ್ತು ನಾನ್ ವೆಜ್ ತಯಾರಿಸುವ ತಿಂಡಿ ತಿನಿಸುಗಳ ಗಾಡಿಯವರು, ನಿಮ್ಮ ಬಳಿ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಹೆಲ್ಪ್ ಲೈನ್ ಸಂಖ್ಯೆ 112 ಹಾಗೂ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಮತ್ತು ಪೌರಕಾರ್ಮಿಕರ ಮೇಸ್ತ್ರಿ ಮೊಬೈಲ್ ಸಂಖ್ಯೆ ಸದಾ ಇರಲಿ, ಅಸಂಘಟಿತ ಕಾರ್ಮಿಕರಿಗೆ ಇರುವ ಇ-ಶ್ರಮ್ ಕಾರ್ಡ್ ನ್ನು ನಿಮ್ಮ ಕುಟುಂಬ ಸದಸ್ಯರ 16 ವರ್ಷ ಮೇಲ್ಪಟ್ಟ ಎಲ್ಲರೂ ಹೆಸರನ್ನು ನೋಂದಾಯಿಸಿ ಕೊಳ್ಳಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ
ಸಿದ್ದು, ದೇವರಾಜ್, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ