ಒಂದು ಕಲ್ಲನ್ನು ಎಡವಿದರು ಒಂದೊಂದು ಶಾಸನ ನಮ್ಮ ಶಿಕಾರಿಪುರದಲ್ಲಿ ಸಿಗುತ್ತದೆ, ಕನ್ನಡದ ಪ್ರಪ್ರಥಮ ಶಾಸನ ಸಿಂಹ ಕಟಾಕ್ಷ ತಲಗುಂದದಲ್ಲಿ ಸಿಕ್ಕಿದೆ, ನನ್ನ ಕ್ಷೇತ್ರದಲ್ಲಿ ವಿವಿಧ ಕೆಲಸವಾಗುತ್ತಿದೆ. ಲಾಲ್ ಬಹಾದ್ದೂರ್ ಶಾಸ್ತ್ರೀ ಮತ್ತು ಮಹಾತ್ಮ ಗಾಂಧೀಜಿ ಅವರ ಹೋರಾಟ ಮತ್ತು ನೆಡೆದು ಬಂದ ಹಾದಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜೊತೆಗೆ ತಿಳಿಯುವ ಪ್ರಯತ್ನವನ್ನು ಮಾಡಬೇಕೆಂದು ಸಂಸದರಾದ ಬಿ. ವೈ ರಾಘವೇಂದ್ರ ತಿಳಿಸಿದರು
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಫಿಟ್ ಇಂಡಿಯಾ ಫ್ರೀಡಂ ರನ್ 2.0 ಮತ್ತು ಗಾಂಧಿ ಜಯಂತಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ 75ನೇ ಸ್ವಾತಂತ್ರ ಭಾರತದ ಅಮೃತಮಹೋತ್ಸವ ಸಲುವಾಗಿ ದೇಶಾದ್ಯಂತ ಫ್ರೀಡಂ ರನ್ ಹಮ್ಮಿಕೊಳ್ಳಲಾಗುತ್ತಿದೆ ಇದರ ಉದ್ದೇಶ ನಿರಂತರ ಓಟದಿಂದ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ, ಶಾಸ್ತ್ರೀಜಿ ಮತ್ತು ಗಾಂಧೀಜಿಯವರು ನಮ್ಮ ದೇಶದ ಆಸ್ತಿ ಅವರ ತ್ಯಾಗ ಮತ್ತು ಆದರ್ಶಗಳನ್ನು ತಿಳಿಸುವುದು ಅವಶ್ಯವಾಗಿದೆ.
ಸ್ವಚ್ಛ ಭಾರತ : ಮಹಾತ್ಮ ಗಾಂಧಿ ಅವರ ಕಲ್ಪನೆಯಂತೆ ಸ್ವಚ್ಛ ಭಾರತ ಹಳ್ಳಿ ಹಳ್ಳಿಗಳಲ್ಲಿಯೂ ವ್ಯಾಪಕವಾಗಿ ತಲುಪಿದೆ. ಸ್ವಚ್ಛಭಾರತ್ 2.0 ವನ್ನು ಹೆಮ್ಮೆಯ ಪ್ರಧಾನಿ ಆದಂತಹ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ನಮ್ಮ ಊರು ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಆರೋಗ್ಯವಂತ ಗ್ರಾಮಗಳು ನಿರ್ಮಾಣವಾಗುತ್ತದೆ.
ಏಕಲವ್ಯ ಪ್ರಶಸ್ತಿ ವಿಜೇತ ಸುಬೇದಾರ್ ಕಾಶೀನಾಥ್ ನಾಯ್ಕ್ ಮಾತನಾಡಿ ದೇಶದ ಯೋಧರು ಎಲ್ಲಾ ಸಮಯದಲ್ಲೂ ಭಾರತಕ್ಕಾಗಿ ಸಮಯ ಕೊಡುತ್ತಾರೆ ನಮ್ಮ ಯುವಕರು ಕೂಡ ದೇಶಕ್ಕಾಗಿ ಏನಾದರು ಮಾಡುವ ಉತ್ಸಾಹ ಬೆಳಿಸಿಕೊಳ್ಳಬೇಕು,
ಮುಂದಿನ ದಿನದಲ್ಲಿ ಗ್ರಾಮೀಣಾ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ಭಾರತವನ್ನು ಪ್ರತಿನಿಧಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಫಿಟ್ ಇಂಡಿಯಾ ಫ್ರೀಡಂ ರನ್ 2.0 ಬೃಹತ್ ಜಾಥಾವನ್ನು ನಗರದ ಸಂಸ್ಕೃತಿಕ ಭವನದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಚಾಲನೆ ನೀಡಿದರು
ಎಂ.ಏ.ಡಿ. ಬಿ ಅಧ್ಯಕ್ಷರಾದ ಗುರುಮೂರ್ತಿ, ಪುರಸಭೆ ಅಧ್ಯಕ್ಷರಾದ ಲಕ್ಷ್ಮಿಮಹಲಿಂಗಪ್ಪ, ತಹಶೀಲ್ದಾರ್ ಕವಿರಾಜ್,ಮುಖ್ಯಾಧಿಕಾರಿ ಸುರೇಶ್, ಶಿಕ್ಷಣಾಧಿಕಾರಿ ಶಶಿಧರ ಮತ್ತು ಪುರಸಭೆಯ ಸದಸ್ಯರು ಸಂಘ ಸಂಸ್ಥೆಯ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ