೭೫ನೇ ವರ್ಷದ ಆಜಾಧಿಕಾ ಅಮೃತ್ ಮಹೋತ್ಸವದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಯವರ ೧೫೨ನೇ ವರ್ಷದ ಜನ್ಮ ದಿನಾಚರಣೆ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ೧೧೭ನೇ ವರ್ಷದ ಜನ್ಮ ದಿನಾಚರಣೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಬೆಳಿಗ್ಗೆ ೭-೩೦ ಕ್ಕೆ ಸರಿಯಾಗಿ ಸೈಕಲ್ ಜಾಥಾವು ಜಿಲ್ಲಾ ಸ್ಕೌಟ್ ಭವನದಿಂದ ಗಾಂಧೀಜಿರವರ ತತ್ವ ಆದರ್ಶದ ಬಗ್ಗೆ ಹಾಗೂ ಪರಿಸರದ ಬಗ್ಗೆ ಬಿತ್ತಿ ಪತ್ರಗಳನ್ನು ಹೊತ್ತುಕೊಂಡು ಹೊರಟ ಸೈಕಲ್‌ಗಳು ನಗರದ ಪ್ರಮುಖ ಬೀದಿಗಳಾದ ಅಮೀರ್ ಅಹ್ಮದ್ ವೃತ್ತ, ಬಸ್ ಸ್ಟಾಂಡ್, ಗೋಪಿ ಸರ್ಕಲ್, ನೆಹರು ರಸ್ತೆ ನಿಂದ ಡಿ.ವಿ.ಎಸ್. ಸರ್ಕಲ್ ಮುಖಾಂತರ ಮತ್ತೆ ಸ್ಕೌಟ್ ಭವನಕ್ಕೆ ಹಿಂತಿರುಗಿತ್ತು. ಈ ಸೈಕಲ್ ಜಾಥಾವನ್ನು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತ್ರಿರವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ವಿಜಯ ಕುಮಾರ್, ಎಸ್.ಜಿ.ವಿ. ಕುಮಾರಿ ಸುಮಲತಾ, ಎ.ಎಲ್.ಟಿ(ಆರ್) ಶ್ರೀ ಎ.ವಿ.ರಾಜೇಶ, ಎಲ್.ಎ.ಕಾರ್ಯದರ್ಶಿ ಶ್ರೀ ಡಿ.ಎನ್.ನೂರ್ ಅಹಮದ್, ನಗರದ ಸ್ಕೌಟ್ಸ್ ಗೈಡ್ಸ್, ರೋವರ್‍ಸ್ ರೇಂಜರ್‍ಸ್ ಹಾಗೂ ಕಬ್, ಬುಲ್‌ಬುಲ್‌ಗಳು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ