ಗಾಂಧೀಜಿರವರ ಸತ್ಯ, ಅಹಿಂಸೆ ತತ್ವಗಳನ್ನು ಸ್ಕೌಟ್ಸ್ ಗೈಡ್ಸ್‌ಗಳು ಅಳವಡಿಸಿಕೊಂಡು ಸಮಾಜಸೇವೆಯಲ್ಲಿ ತೋಡಗಿಸಿಕೊಳ್ಳುವುದು. ಶ್ರೀ ಹೆಚ್.ಡಿ.ರಮೇಶಶಾಸ್ತ್ರಿ
ಜಿಲ್ಲಾ ಮುಖ್ಯ ಆಯುಕ್ತರು.
೭೫ನೇ ವರ್ಷದ ಆಜಾಧಿಕಾ ಅಮೃತ್ ಮಹೋತ್ಸವದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಯವರ ೧೫೨ನೇ ವರ್ಷದ ಜನ್ಮ ದಿನಾಚರಣೆ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ೧೧೭ನೇ ವರ್ಷದ ಜನ್ಮ ದಿನಾಚರಣೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಹಮ್ಮೀಕೋಳ್ಳಲಾಗಿತ್ತು. ಎ.ಎಸ್.ಒ.ಸಿ. ಶ್ರೀಮತಿ ಭಾರತಿ ಡಾಯಸ್ ರವರ ನೇತ್ರತ್ವದಲ್ಲಿ ಸರ್ವಧರ್ಮ ಪ್ರಾರ್ಥನೆಯು ನಡೆಯಿತು. ಸರ್ವಧರ್ಮ ಪ್ರಾರ್ಥನೆಯ ಬಳಿಕ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರು ಶಾಸ್ತ್ರಿರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಪರಿಸರ ಪ್ರೇಮಿ ಹಾಗೂ ನಿವೃತ್ತಿ ಪ್ರಾಂಶುಪಾಲರಾದ ಡಾ. ಶೇಖರ್ ಗೌಳೇರ ರವರು ಗಾಂಧಿಜಿರವರ ತತ್ವ ಆದರ್ಶದ ಬಗ್ಗೆ ಮಾತನಾಡುತ್ತಾ ಅವರ ಜೀವನ ಚರಿತ್ರೆಯ ಬಗ್ಗೆ ಸಂಕ್ಷೀಪ್ತವಾಗಿ ತಿಳಿಸಿದಲ್ಲದೆ ಲಾಲ್ ಬಹುದ್ದೂರು ಶಾಸ್ತ್ರಿ ರವರ ಬಗ್ಗೆಯು ಮಾಹಿತಿಯನ್ನು ನೀಡಿದರು. ಅಹಿಂಸೆ ಮಾರ್ಗವೆ ಅವರ ತತ್ವ ಸಿದ್ದಾಂತ ಆಗಿದ್ದು ಅವರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಪಶ್ಚಿಮ ಸಂಚಾರಿ ಪೋಲಿಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸಪೇಕ್ಟರ್ ಆದ ಶ್ರೀ ಎನ್. ಮಂಜುನಾಥರವರು ರಸ್ತೆ ಸುರಕ್ಷತೆ, ಹೆಂಡ್ ಸಿಗ್ನಲ್ಸ್ ಹಾಗೂ ಇಂಡಿಕೇಟರ್ ಸಿಗ್ನಲ್ಸ್ ಬಗ್ಗೆ ಮಾಹಿತಿ ನೀಡಿ, ಟ್ರಾಪಿಕ್ ನಿಯಮಗಳ ನ್ನು ಪಾಲಿಸುವುದರಿಂದ ನಮ್ಮ ಸುರಕ್ಷತೆ ಜೋತೆಗೆ ಇತರ ವಾಹನ ಚಾಲಕರ ಸುರಕ್ಷತೆ ಆಗುತ್ತದ ಆದ್ದರಿಂದ ತಾವೆಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತ್ರಿ ರವರು ಮಾತನಾಡುತ್ತಾ ಭಾರತೀಯ ಮೌಲ್ಯಗಳನ್ನು ಹಾಗೂ ಗಾಂಧೀಜಿರವರ ಸತ್ಯ, ಅಹಿಂಸೆ ತತ್ವಗಳನ್ನು ನಮ್ಮ ಸ್ಕೌಟ್ಸ್ ಗೈಡ್ಸ್‌ಗಳು ತಾವು ಅಳವಡಿಸಿಕೊಂಡು ಸಮಾಜಸೇವೆಯನ್ನು ಮಾಡುತ್ತಾ ಶಿವಮೊಗ್ಗ ಜಿಲ್ಲೆಗೆ ಹೆಸರು ತರಬೇಕೆಂದು ತಿಳಿಸಿ ಮಕ್ಕಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ವಿಜಯ ಕುಮಾರ್, ಎಸ್.ಜಿ.ವಿ. ಕುಮಾರಿ ಸುಮಲತಾ, ಎ.ಎಲ್.ಟಿ(ಆರ್) ಶ್ರೀ ಎ.ವಿ.ರಾಜೇಶ, ಎಲ್.ಎ.ಕಾರ್ಯದರ್ಶಿ ಶ್ರೀ ಡಿ.ಎನ್.ನೂರ್ ಅಹಮದ್, ನಗರದ ಸ್ಕೌಟ್ಸ್ ಗೈಡ್ಸ್, ರೋವರ್‍ಸ್ ರೇಂಜರ್‍ಸ್ ಹಾಗೂ ಕಬ್, ಬುಲ್‌ಬುಲ್‌ಗಳು ಉಪಸ್ಥಿತರಿದ್ದರು.

ಕೊಡದೆ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ