03/10/21 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರಸ್ತೆಯ ಗಾಜನೂರು ಸಂತೆ ವ್ಯಾಪಾರ ಮಾಡುವ ಸ್ಥಳಕ್ಕೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು ಭೇಟಿ ನೀಡಿ ಅಲ್ಲಿನ ಸಂತೆ ಮಾಡುವ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಮತ್ತು ಬೀದಿ ಬದಿ ಗುರುತಿನ ಚೀಟಿಯ ಬಗ್ಗೆ ಕೇಳಲಾಯಿತು.
ವೃದ್ದ ಮಹಿಳೆಯೊಬ್ಬರು ನಾವು ಸಂತೆ ವ್ಯಾಪಾರಿಯಾಗಿದ್ಧು, ಮತ್ತು ಶಿವಮೊಗ್ಗ ನಗರದ ನಿವಾಸಿಯಾಗಿದ್ದು ಜಿಲ್ಲೆಯಲ್ಲಿ ಎಲ್ಲಾ ಸಂತೆಗಳಿಗೂ ಹೋಗಿ ವ್ಯಾಪಾರ ಮಾಡುತ್ತಿವಿ. ನಮಗೆ ಈ ಗುರುತಿನ ಚೀಟಿಯ ಬಗ್ಗೆ ಮಾಹಿತಿ ಇಲ್ಲಾ, ಇನ್ನೊಬ್ಬರು ನಾವೂ ರವಿವರ್ಮ ಬೀದಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತೇವೆ. ಯಾವಾಗಲಾದರೂ ಒಮ್ಮೊಮ್ಮೆ ಸಂತೆಗಳಲ್ಲಿ ವ್ಯಾಪಾರ ಮಾಡುತ್ತೇವೆ. ನಮಗೂ ಇದರ ಬಗ್ಗೆ ಗೊತ್ತಿಲ್ಲ ಎಂದರು.
ಇವರಿಗೆ ಸಂತೆ ವ್ಯಾಪಾರಕ್ಕೆ ಬರುವ ಬೀದಿ ಬದಿ ವ್ಯಾಪಾರಿಗಳಿಗೆ ಸಂಚಾರಿ ವ್ಯಾಪಾರಿ ಎಂದು ನಿಮ್ಮ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಿರ ಹಾಗೂ ಸಂಚಾರಿ ವ್ಯಾಪಾರಿಗಳೆಂದು ಗುರುತಿನ ಚೀಟಿ ನೀಡುವರು ಅದನ್ನು ಸದಾ ವ್ಯಾಪಾರ ಮಾಡುವಾಗ ನಿಮ್ಮ ಬಳಿ ಇರಬೇಕು. ಈಗ ಕಳ್ಳರು ನಗರಗಳಲ್ಲಿ ಊರುಗಳಲ್ಲಿ ವ್ಯಾಪಾರಿಗಳಂತೆ ಹಗಲಿನಲ್ಲಿ ತಿರುಗುವರು ರಾತ್ರಿ ವೇಳೆ ಕನ್ನ ಹಾಕುವರು. ನಿವೂಗಳೂ ಸಂಚಾರಿ ವ್ಯಾಪಾರ ಮಾಡುತ್ತಾ ಊರುಗಳು ತಿರುಗುತ್ತಿದ್ದರೆ ಅನುಮಾನ ಕೊಂಡು ನಾಗರಿಕರಾಗಲಿ ಅಥವಾ ಪೊಲೀಸ್ ಸಿಬ್ಬಂದಿಯಾಗಲಿ ಕೇಳಿದಾಗ ಕಡ್ಡಾಯ ನಿಮ್ಮ ಬಳಿ ಗುರುತಿನ ಚೀಟಿ ಇರಬೇಕು.
ಬೀದಿ ಬದಿ ವ್ಯಾಪಾರ ಮಾಡುವ ಅಸಂಘಟಿತ ಶ್ರಮಿಕರಿಗೆ ಕೇಂದ್ರ ಸರ್ಕಾರದ ಇ-ಶ್ರಮ್, ಪಿಎಂ ಸ್ವ ನಿಧಿ ಕಿರು ಸಾಲ, ಪಿವೈ ಪೆಂಕ್ಷನ್ ಕ್ಷೀಂ, ಇನ್ನೂ ಹಲವು ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಗುರುತಿನ ಚೀಟಿ ಪಡೆಯದೆ ಇರುವವರು ಈಗಲೇ ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿಗಾಗಿ ಅರ್ಜಿ ಪಾಲಿಕೆಗೆ ನೀಡಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂತೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ