ಶಿವಮೊಗ್ಗ ನ್ಯೂಸ್….

ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್-226 ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ವಿಟಗೊಂಡನಕೊಪ್ಪದ ಉಮೇಶ್ ಕುಟುಂಬಕ್ಕೆ 25 ಸಾವಿರ ರೂ. ಆರ್ಥಿಕ ಸಹಾಯ ಮಾಡಲಾಯಿತು.
ಹುತಾತ್ಮ ಯೋಧ ಉಮೇಶ್ ಪತ್ನಿ ವೀಣಾ ಅವರು ಮಾತನಾಡಿ, ಯೋಧನ ಪತ್ನಿ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ. ನನಗೆ ಇಬ್ಬರು ಮಕ್ಕಳು ಇದ್ದು, ಆ ಮಕ್ಕಳನ್ನು ಕೇಂದ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದು, ಮಗನನ್ನು ಸೇನೆಗೆ ಸೇರಿಸಲು ಇಚ್ಚಿಸದ್ದೇನೆ. ದೇಶಕ್ಕೆ ಮಾಡುವ ಸೇವೆ ಸಾರ್ಥಕ ಎಂದು ತಿಳಿಸಿದರು.
ಪತಿ ಯೋಧರಾಗಿ ಸೇವೆ ಸಲ್ಲಿಸಿದ್ದರಿಂದ ಕುಟುಂಬಕ್ಕೆ ವಿಶೇಷ ಗೌರವ ಸಿಕ್ಕಿದೆ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಇನ್ನೂ ಸಿಕ್ಕಿಲ್ಲ ಎಂದು ಹೇಳಿದರು.


ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರು ಮತ್ತು ಅವರ ಕುಟುಂಬದವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯಕ್ರಮ ವಿಶೇಷವಾಗಿದೆ. ರೌಂಡ್ ಟೇಬಲ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯೋಧ ಉಮೇಶ್ ಅವರು ಅರುಣಾಚಲ ಪ್ರದೇಶ, ಪಂಜಾಬ್, ಜಮ್ಮು ಕಾಶ್ಮೀರ, ಛತ್ತೀಸ್‌ಘಡ್, ರಾಜಸ್ಥಾನ ಹಾಗೂ ವಿವಿಧ ಕಡೆಗಳಲ್ಲಿ ಯೋಧನಾಗಿ ಕೆಲಸ ಮಾಡಿದ್ದಾರೆ ಎಂದರು.
ರೌAಡ್ ಟೇಬಲ್ ಏರಿಯಾ 13 ಚರ‍್ಮನ್ ವಿನಯ್ ಟಿ.ಆರ್ ಮಾತನಾಡಿ, ದೇಶದಾದ್ಯಂತ ರೌಂಡ್ ಟೇಬಲ್ ವತಿಯಿಂದ 80 ಕುಟುಂಬಗಳಿಗೆ 25 ಸಾವಿರ ರೂ. ನೀಡಲಾಗುತ್ತಿದೆ. ಇದೇ ಶಿಕ್ಷಣ ಕ್ಷೇತ್ರದಲ್ಲೂ ರೌಂಡ್ ಟೇಬಲ್ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ವಿವರಿಸಿದರು.
ಪ್ರಮುಖರಾದ ಆದರ್ಶ್ರಾಜ್, ನಿಥಿನ್, ಮಂಜುನಾಥ್, ಸಚಿನ್, ವಿಶಾಲ್, ಶಬರಿರಾಜ್, ರೋಹನ್, ಪೃಥ್ವಿಕ್, ಸಿದ್ಧಾರ್ಥ್ ಮತ್ತಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ