ಶಿವಮೊಗ್ಗ ನ್ಯೂಸ್…
ಕಾಶ್ಮೀರದಲ್ಲಿ ನಡೆದ ಪಂಡಿತ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಇಂದು ಗೋಪಿವೃತ್ತದಲ್ಲಿ ದಾವೂದ್ ಇಬ್ರಾಹಿಂ, ಅಜರ್ ಮಸೂದ್, ಯಾಸಿನ್ ಭಟ್ಕಳ್ ಉಗ್ರರ ಭಾವಚಿತ್ರ ಸುಡುವುದರ ಮೂಲಕ ಪ್ರತಿಭಟನೆ ನಡೆಸಿದರು.
ಆರ್ಟಿಕಲ್ 370 ನ್ನು ರದ್ದುಪಡಿಸಿದ ನಂತರವೂ ಈ ಘಟನೆ ನಡೆದಿರುವುದು ಖಂಡನೀಯ. 1990 ರಲ್ಲಿ ನಡೆಯುತ್ತಿದ್ದ ಈ ಘಟನೆಗಳು ೀಗ ಮತ್ತೆ ಮರುಕಳಿಸಿವೆ. ಆಫ್ಘಾನಿಸ್ಥಾನವನ್ನು ತಾಲಿಬಾನ್ ಉಗ್ರರು ಅತಿಕ್ರಮಣ ಮಾಡಿಕೊಂಡ ನಂತರ ಇಂತಹ ಘಟನೆಗಳು ಕಾಶ್ಮೀರದಲ್ಲಿ ಹೆಚ್ಚಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಲಷ್ಕರ್ ಎ ತೋಯ್ಬಾ ಸಂಘಟನೆ ಕಾಶ್ಮೀರ ಪಂಡಿತರ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ. ಒಂದು ವೇಳೆ ಇಂತಹ ಕೃತ್ಯ ಹೆಚ್ಚಾದಲ್ಲಿ ಬಜರಂಗದಳ ಪಂಡಿತರ ಬೆನ್ನೆಲುಬಾಗಿ ನಿಂತು ಹೋರಾಡದಲಿದೆ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರಾದ ನಾರಾಯಣ ವರ್ಣೇಕರ್, ರಾಜೇಶ್ ಗೌಡ, ಸತೀಶ್ ಮುಂಚೆಮನೆ, ಸುಧಾಕರ್, ಅಂಕುಶ್ ಇನ್ನಿತರರು ಭಾಗವಹಿಸಿದ್ದರು.