ಶಿವಮೊಗ್ಗ ನಗರ ಸಮಸ್ತ ಕೇಬಲ್ ಟಿ.ವಿ, ಡಿಶ್ ಟಿ.ವಿ, ಅಂತರ್ಜಾಲ ಹಾಗೂ ದೂರವಾಣಿಯ ಜಾಲ ಹೊಂದಿರುವ ಮಾಲೀಕರ/ ವ್ಯವಸ್ಥಾಪಕರ ಗಮನಕ್ಕೆ ಈ ಮೂಲಕ ತಿಳಿಯಪಡಿಸುವದೇನೆಂದರೆ, ದಿನಾಂಕ:15.10.2021 ರಂದು ವಿಜಯದಶಮಿ ಅಂಗವಾಗಿ ದಸರಾ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯು ಕೋಟೆ ರಸ್ತೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಹೊರಟು ಎಸ್.ಪಿ ರಸ್ತೆ, ಗಾಂದಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸಂಗೊಳ್ಳಿ ರಾಯಣ್ಣ ರಸ್ತೆ (ಹಳೇ ಜೈಲು ರಸ್ತೆ), ಲಕ್ಷ್ಮೀ ಚಿತ್ರ ಮಂದಿರ ವೃತ್ತದ ಮುಖಾಂತರ ಸಾಗಿ ಸ್ವಾತಂತ್ರ್ಯ ಉದ್ಯಾನವನದ ಬನ್ನಿ ಮುಡಿಯುವ ಮಂಟಪ ತಲುಪಲಿದೆ.
ಈ ಮಾರ್ಗದಲ್ಲಿ ಹಲವು ಕಡೆ ರಸ್ತೆ ಮಟ್ಟದಿಂದ ಕನಿಷ್ಠ 20 ಅಡಿ ಗಿಂತ ಕಡಿಮೆ ಎತ್ತರಕ್ಕೆ ರಸ್ತೆಗೆ ಅಡ್ಡಲಾಗಿ ಹಾಯಿಸಿರುವ ಕೇಬಲ್ ಟಿ.ವಿ, ಡಿಶ್ ಟಿ.ವಿ, ಅಂತರ್ಜಾಲ, ದೂರವಾಣಿ ಕೇಬಲ್ ಗಳಿದ್ದು, ಜಂಬೂ ಸವಾರಿ ಸಾಗಲು ಅಡಚಣೆ ಉಂಟಾಗುತ್ತದೆ. ಆದ್ದರಿಂದ ಸಂಬಂಧಿಸಿದವರು ಸದರಿ ಕೇಬಲ್ ಗಳನ್ನು ಈ ಕೂಡಲೇ ತೆರವುಗೊಳಿಸುವುದು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳುವುದು. ಇದಕ್ಕೆ ತಪ್ಪಿದಲ್ಲಿ ಜಂಬೂ ಸವಾರಿ ವೇಳೆಯಲ್ಲಿ ಸದರಿ ಕೇಬಲ್ ಗಳಿಗೆ ಹಾನಿ ಉಂಟಾದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಜವಾಬ್ದಾರರಾಗಿರುವುದಿಲ್ಲ. ಆದ್ದರಿಂದ ಈ ಕೂಡಲೇ ರಸ್ತೆ ಮಟ್ಟದಿಂದ 20 ಅಡಿ ಅಂತರದ ಒಳಗೆ ರಸ್ತೆಗೆ ಅಡ್ಡಲಾಗಿ ಹಾಕಿರುವ ಕೇಬಲ್ ಗಳನ್ನು ತಕ್ಷಣದಿಂದ ತೆರವುಗೊಳಿಸಲು ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು , ಈ ಮೂಲಕ ತಿಳಿಸಿದೆ.