ಶಿವಮೊಗ್ಗ ನ್ಯೂಸ್…
ಕೌಶಲ್ಯ ಹೊಂದಿದ ಕೈಗಳಿಗೆ ನಿರುದ್ಯೋಗ ಕನಸಿನ ಮಾತು. ಯಾವ ವ್ಯಕ್ತಿಗೆ ಸರಿಯಾದ ಕುಶಲತೆ, ಕೌಶಲ್ಯ ಇರುತ್ತದೋ ಆ ವ್ಯಕ್ತಿಯಿಂದ ತನ್ನ ಜೀವನೋಪಾಯವು ಸುಲಭ, ಸಮಾಜಕ್ಕೂ ಶಕ್ತಿ ಹಾಗೂ ದೇಶಕ್ಕೂ ಶಕ್ತಿ. ಈ ಹಿನ್ನಲೆಯಲ್ಲೆ ಮಾನ್ಯ ನರೇಂದ್ರ ಮೋದಿಯವರು #Skillindia ದ ಪರಿಕಲ್ಪನೆಯ ಮೂಲಕ ಭಾರತದ ಜನತೆಯಲ್ಲಿ ಕೌಶಲ್ಯವನ್ನು ಹೊಚ್ಚಿಸುವ ಕೆಲಸ ಕಳೆದ 7 ವರ್ಷದಿಂದ ಮಾಡುತ್ತಿದ್ದಾರೆ.
ಹಾಗೂ ಮಹಿಳೆಯರಲ್ಲಿ ಟೈಲರಿಂಗ್ ನಂತಹ ಕೌಶಲ್ಯ ಹೆಚ್ಚಾದಷ್ಟು ಮಹಿಳಾ ಸಬಲೀಕರಣ ಆಗುತ್ತದೆ, ಅವರ ವರಮಾನ ಹೆಚ್ಚಾಗಿ ಅವರ ಸಂಸಾರಕ್ಕೆ ಪುಷ್ಟಿ ನೀಡುತ್ತದೆ. ಹಾಗಾಗಿ ವ್ಯಕ್ತಿಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಕೆಲಸ ನಮ್ಮೆಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಯಮದ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ ತಿಳಿಸಿದರು….
ಶಿವಮೊಗ್ಗದ ಜಯನಗರ ಮೊದಲನೇ ತಿರುವಿನಲ್ಲಿ ನೂತನವಾಗಿ ಆರಂಭವಾಗಿರುವ “ಹನಿಕಾ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನಿಂಗ್ ಕಾಲೇಜ್” ನ (fashion designing training centre) ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು,
ಇತ್ತೀಚೆಗೆ ಜನತೆಯಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದ್ದು, ಸೌಂದರ್ಯಕ್ಕೆ ಹೆಚ್ಚು ಒತ್ತುಕೊಡುತ್ತಿರುವ ಹಿನ್ನೆಲೆಯಲ್ಲಿ ನವನಾವಿನ್ಯವಾದ ಉಡುಪುಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಈ ಬೇಡಿಕೆಗಳನ್ನು ಸ್ಥಳೀಯವಾಗಿ ಪೂರೈಸುವ ಕಾರ್ಯ ಆಗಬೇಕು ಈ ಹಿನ್ನೆಲೆಯಲ್ಲಿ ಹನಿಕಾ ಫ್ಯಾಷನ್ ಡಿಸೈನಿಂಗ್ ಶಾಲೆ ಶಿವಮೊಗ್ಗ ಜಿಲ್ಲೆಯ ಹೆಣ್ಣು ಮಕ್ಕಳಿಗೆ ಹಾಗೂ ಇದನ್ನು ಕಲಿಯಲು ಹೆಚ್ಚು ಆಸಕ್ತಿ ಇರುವವರಿಗೆ ತರಬೇತಿ ನೀಡಿ ಶಕ್ತಿ ಕೊಡುವಂತಹ ಕೆಲಸ ಆಗಬೇಕೆಂದು ಹೇಳಿದರು…
ಹಾಗೂ ಇದರ ಮಾಲೀಕರಾದ ಅಖಿಲರವರಿಗೆ ಇದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಶಕ್ತಿ ಭಗವಂತ ನೀಡಲಿ, ನೂರಾರು ಜನತೆಗೆ ಟೈಲರಿಂಗ್ ಹೊಲಿಗೆಯ ಕೌಶಲ್ಯ, ಫ್ಯಾಶನ್ ಡಿಸೈನಿಂಗ್ ಕೌಶಲ್ಯ ಕಲಿಸಲಿ ಎಂದು ಶುಭ ಹಾರೈಸಿದರು…
ಈ ಸಂಧರ್ಭದಲ್ಲಿ ಶಿವಮೊಗ್ಗದ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಆದ ಚೈತನ್ಯ, ಮಾಲೀಕರಾದ ಅಖಿಲ ಮತ್ತು ಅವರ ಪತಿ ಚಂದನ್, ಹಿರಿಯರಾದ ಲಕ್ಷ್ಮಿಕಾಂತ್, ದೇವೇಂದ್ರಪ್ಪ ರವರು ಸೇರಿದಂತೆ ಅವರ ಕುಟುಂಬವರ್ಗದವರು ಸ್ನೇಹಿತರು ಉಪಸ್ಥಿತರಿದ್ದರು…