ಶಿವಮೊಗ್ಗ ನ್ಯೂಸ್…
ಪರಿಸರವನ್ನು ಸ್ವಚ್ಚವಾಗಿರಿಸಲು ಬಯೋ ಕಾಂಪೋಸ್ಟ್ ಅತ್ಯಂತ್ತ ಪರಿಣಾಮಕಾರಿ : ಮಹಾದೇವ್ ಸ್ವಾಮಿ, ರಾಷ್ಟçಪ್ರಶಸ್ತಿ ಪುರಸ್ಕೃತರು.
ಮನೆಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ರಸ್ತೆಗೆ ಬಿಸಾಡುವುದರ ಮುಖಾಂತರ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಕಸವನ್ನು ಮನೆಯಲ್ಲೆ ಬಯೋ ಕಾಂಪೋಸ್ಟ್ ಮಾಡುವ ಮೂಲಕ ಉತ್ತಮ ಗೊಬ್ಬರ ಸಿಗುವುದಲ್ಲದೇ, ಕಸವನ್ನು ವಿಲೆವಾರಿ ಆಡುವ ಸಮಸ್ಯೆ ಬರುವುದಿಲ್ಲ. ಪರಿಸರವನ್ನು ಸ್ವಚ್ಚವಾಗಿರಲು ಅತ್ಯಂತ್ತ ಕಡಿಮೆ ಖರ್ಚಿನ ಬಯೋ ಕಾಂಪೋಸ್ಟ್ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ರಾಷ್ಟçಪ್ರಶಸ್ತಿ ಪುರಸ್ಕೃತರು ಹಾಗೂ ಪರಿಸರ ಪ್ರೇಮಿ ಡಾ. ಮಹಾದೇವ್ ಸ್ವಾಮಿಯವರ ನುಡಿದರು.
ಅವರು ಇಂದು ಬೆಳಿಗ್ಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಶಿಪುರದಲ್ಲಿ ಬಯೋ ಕಾಂಪೋಸ್ಟ್ ಪೈಪ್ ಉಪಕರಣಗಳನ್ನು ಅಳವಡಿಸುವುದರ ಮುಖಾಂತರ ಪ್ರಾತ್ಯಕ್ಷತೆ ನೀಡಿ ಮಾಹಿತಿ ನೀಡಿದರು. ಇಂದು ಶಿವಮೊಗ್ಗ ನಗರದಲ್ಲಿ ಪ್ರತಿದಿನ ೧೬೦ ಟನ್ ಕಸ ಉತ್ಪತ್ತಿ ಯಾಗುತ್ತದೆ, ಕಸ ವಿಲೆವಾರಿ ಮಾಡುವುದು ತುಂಬಾ ಸಮಸ್ಯೆ ಇದೆ ಆದ್ದರಿಂದ ನಾವುಗಳು ಮನೆಯಲ್ಲಿ ಕಸದ ಉತ್ಪಾಧನೆಯನ್ನು ಕಡಿಮೆ ಮಾಡುವುದರ ಮುಖಾಂತರ ಪರಿಸರವನ್ನು ಉಳಿಸಬೇಕು ಎಂದು ನುಡಿದರು. ಈಗಾಗಲೇ ಶಿವಮೊಗ್ಗ ನಗರದ್ಯಾಂತ ೬೦೦ಕ್ಕೂ ಹೆಚ್ಚು ಕಡೆಗಳಲ್ಲಿ ಬಯೋ ಕಾಂಪೋಸ್ಟ್ ಪೈಪ್‌ಗಳನ್ನು ಅಳವಡಿಸಿ ಪರಿಸರ ಜಾಗೃತಿ ಮೂಡಿಸಿದ್ದೇವೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಉತ್ತರ ಪ್ರೊ. ಸತ್ಯನಾರಾಯಣ್‌ರವರು ವಹಿಸಿ ಮಾತನಾಡುತ್ತಾ ಈಗಾಗಲೇ ರೋಟರಿ ಸಂಸ್ಥೆ ವತಿಯಿಂದ ರೋಟರಿ ಫಾರೆಸ್ಟ್ ಹಾಗೂ ಪರಿಸರದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಎಂ.ದೂಳಪ್ಪ, ವಲಯ ಸಹಾಯಕ ಗರ‍್ನರ್ ರವೀದ್ರನಾಥ್ ಐತಾಳ್, ಜಿ.ವಿಜಯಕುಮಾರ್, ಉಮೇಶ್, ಇನ್ನರ್‌ವೀಲ್ ಕಾರ್ಯಕ್ರದರ್ಶಿ ಬಿಂದು ವಿಜಯಕುಮಾರ್, ಸತೀಶ್‌ಚಂದ್ರ, ಮುಖ್ಯೋಪ್ಯಾದ್ಯಾಯರಾದ ಎಸ್.ಹಾಲಾನಾಯ್ಕ್ ಉಪಸ್ಥಿತರಿದ್ದು.