66 ಕನ್ನಡ ರಾಜ್ಯೋತ್ಸವ…

ಕನ್ನಡ ನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡಕ್ಕೆ ಮೊದಲ ಆದ್ಯತೆ : ಬಿ. ವೈ. ರಾಘವೇಂದ್ರ

ಶಿಕಾರಿಪುರ : ನಮ್ಮ ಅನ್ನ ಕೊಡುವ ಭಾಷೆ ಕನ್ನಡ ಇಂತಹ ಪುಣ್ಯದ ಭೂಮಿ ಕನ್ನಡನಾಡು ಭಾಷೆ ನಾಡು ನುಡಿಗೆ ಹೆಚ್ಚಿನ ಕೆಲಸವನ್ನು ಮಾಡೋಣ, ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡಕ್ಕೆ ಮೊದಲ ಆಧ್ಯತೆ ಕೊಡುತ್ತೇವೆ ಜೊತೆಗೆ ಮುಂದಿನ ದಿನದಲ್ಲಿ ಶಿವಮೊಗ್ಗವು ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಪ್ರವಾಸೋಧ್ಯಮದಲ್ಲಿ ಅವರ ಕೊಡುಗೆ ನೀಡಿದೆ ಇದನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗದ ಕೋಟೆಗಂಗೂರಿನ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿಯ ಭಾಗವಾಗಿ ರೂ 21.2 ಕೋಟಿ ಅಂದಾಜು ವೆಚ್ಚದ ನೂತನ ಕ್ರಾಸಿಂಗ್ ರೈಲ್ವೆ ನಿಲ್ದಾಣ ಕಾಮಗಾರಿಗೆ ಮಂಜೂರಾತಿಯನ್ನು ಕೇಂದ್ರ ಸರ್ಕಾರ ನೀಡಿದೆ, ಮುಂದಿನ ದಿನದಲ್ಲಿ ಶಿವಮೊಗ್ಗ ಭಾಗದಿಂದ ವಿವಿಧ ಭಾಗಗಳಿಗೆ ರೈಲು ಸಂಚಾರವನ್ನು ಆರಂಭಿಸಲು ಈ ಯೋಜನೆ
ನೆರವಾಗಲಿದೆ.

ಸಚಿವರಿಗೆ ಅಭಿನಂದನೆ : ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಸಾಕಷ್ಟು ಕಾರ್ಯಕ್ರಮ ನೆಡೆದಿದೆ ಗೀತಾ ಗಾಯನದ ಮೂಲಕ ಲಕ್ಷಾಂತರ ಜನರನ್ನು ತಲುಪಿದೆ ಜೊತೆಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ 4 ಸಾಧಕರಿಗೆ ಲಭಿಸಿದೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಅವರಗೆ ಅಭಿನಂದನೆ ಸಲ್ಲಿಸುತ್ತೇನೆ.

ಶಿಕಾರಿಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಪುರಸಭೆ, ವಿವಿಧ ಇಲಾಖೆಗಳು, ಹಾಗೂ ಕನ್ನಡ ಯುವಕ ಸಂಘ (ನೋಂ) ವಿವಿಧ ಸಂಘಟನೆಗಳು, ಶಿಕಾರಿಪುರ ತಾಲ್ಲೂಕು ಇವರುಗಳ ಸಂಯುಕ್ತ ಆಶ್ರಯದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ ಯಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು

ತಹಶೀಲ್ದಾರ್ ಕವಿರಾಜ್. ಎಂ.ಎ.ಡಿ.ಬಿ ಅಧ್ಯಕ್ಷರಾದ ಗುರುಮೂರ್ತಿ,
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚನ್ನವೀರಪ್ಪ. ಟಿ, ಪುರಸಭೆ ಅಧ್ಯಕ್ಷರಾದ ಲಕ್ಷ್ಮಿ ಮಹಲಿಂಗಪ್ಪ, ಸಂಜು ವೈ ಸ್ವಾಮಿ, ರುದ್ರಮುನಿ, ಮತ್ತು ತಾಲೂಕು ಆಡಳಿತದ ಸಿಬ್ಬಂದಿ ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.