ಕೋಲಾರ ನ್ಯೂಸ್…
ಭಾರತ ರತ್ನ ಸರ್ ಸಿ. ವಿ.ರಾಮನ್ ರವರ ಹುಟ್ಟು ಹಬ್ಬವನ್ನು ಕೋಲಾರ ನಗರದ ಟೇಕಲ್ ರಸ್ತೆಯ ಮಕ್ಕಳ ಉದ್ಯಾನವನದಲ್ಲಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಗಿಡ ನೆಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾದ್ಯಕ್ಷ ಕೆ. ಆರ್.ತ್ಯಾಗರಾಜ್ ಸರ್ ಸಿ.ವಿ.ರಾಮನ್ ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ “ರಾಮನ್ ಎಫೆಕ್ಟ್” ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದವರು. ಇವರ ಜನ್ಮ ದಿನವನ್ನು ವಿಶ್ವ ವಿಜ್ಞಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇಂದು ಸಂಘಟನೆಯು ಗಿಡ ನೆಡುವ ಮೂಲಕ ಸರ್.ಸಿ.ವಿ.ರಾಮನ್‌ರವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಉಸಿರಾಡಲು ಪ್ರತಿಯಬ್ಬರಿಗೂ ಆಮ್ಲಜನಕ ಮುಖ್ಯ. ಪ್ರತಿಯೊಬ್ಬರೂ ಕೂಡ ಪರಿಸರವನ್ನು ಉಳಿಸಿ ಬೆಳಸಬೇಕಿದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ ಈ ದಿನ ನಾವು ಸಿ. ವಿ.ರಾಮನ್ ರವರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಗಿಡ ಮನುಷ್ಯನಿಗೆ ಹೇಳುತ್ತೆ ೧೦ ವರ್ಷ ನನಗೆ ನೀರು ಹಾಕು, ನೀನು ಇರುವಷ್ಟು ದಿನ ನಾನು ಗಾಳಿ ನೀಡುತ್ತೇನೆ ಎಂದು ಹೇಳುತ್ತದೆ ಆದರೆ ಮಾನವನು ಗಿಡ ಮರಗಳನ್ನು ನಾಶಪಡಿಸಲು ಹೊರಟಿದ್ದಾನೆ. ನಮ್ಮ ಆರೋಗ್ಯಕ್ಕೆ ಮಾಖ್ಯವಾಗಿ ಗಾಳಿ ಬೇಕು ಆದ್ದರಿಂದ ಎಲ್ಲರೂ ಸಸಿ ಗಿಡಗಳನ್ನು ಬೆಳೆಸಬೇಕು ಎಂದರು.
ಟೈಗರ್ ವೆಂಕಟೇಶ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಸಾಕಷ್ಟು ಜನ ಸಾವಿಗೀಡಾಗಿರು ನಿದರ್ಶನಗಳು ನಮ್ಮ ಕಣ್ಣಮುಂದೆ ಇದೆ ಪ್ರತಿಯೊಬ್ಬರೂ ಸಸಿನೆಡುವ ಮೂಲಕ ಸಮಾಜಮುಖಿ ಕೆಲಸಮಾಡಬೇಕು. ಈ ದಿನ ಜಯ ಕರ್ನಾಟಕ ಸಂಘಟನೆಯು ಸರ್. ಸಿ. ವಿ ರಾಮನ್.ರವರ ಜನ್ಮದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸುವುದು ಅತುತ್ತಮವಾದ ಕಾರ್ಯವೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ವಿ. ಜಗದೀಶ, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಸಿಂಗ್, ಅಮರನಾಥ್ ಸ್ವಾಮಿ, ಕೀಲುಕೋಟೆ ಆಂಜಿನಪ್ಪ, ಎಸ್.ಮಂಜುನಾಥ್, ನಂದೀಶ್, ನಾಮಾಲ್ ಮಂಜುನಾಥ್, ಸುಲಿಕುಂಟೆ ನಾಗರಾಜ್, ಆಟೋ ಘಟಕದ ಶ್ರೀರಾಮ್, ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.