ಶಿವಮೊಗ್ಗ ನ್ಯೂಸ್…
ವಾರಗಟ್ಟಲೆ ಕಸ ಸಂಗ್ರಹಕ್ಕೆ ವಾಹನ ಬಾರದ ಹಿನ್ನೆಲೆ ಕಸದ ಬುಟ್ಟಿಯನ್ನು ನಡುರಸ್ತೆಗೆ ತಂದಿಟ್ಟುಕೊಂಡು ಮಹಿಳೆಯರು ಪ್ರತಿಭಟನೆ ನಡೆಸಿದರು. ವಿಚಾರ ತಿಳಿಯುತ್ತಿದ್ದಂತೆ ಕಸ ಸಂಗ್ರಹ ಮಾಡುವ ಎರಡು ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ.
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಡಿ – ಬ್ಲಾಕ್’ನ 6ನೇ ಅಡ್ಡರಸ್ತೆಯಲ್ಲಿ ಇವತ್ತು ಬೆಳಗ್ಗೆ ಮಹಿಳೆಯರು ಪ್ರತಿಭಟನೆ ನಡೆಸಿದರು. ರಸ್ತೆಗೆ ಅಡ್ಡಲಾಗಿ ಕಸದು ಬುಟ್ಟಿಗಳನ್ನು ಇರಿಸಿ, ಮಹಿಳೆಯರು ಪ್ರತಿಭಟನೆ ನಡಸಿದರು.
ಒಮ್ಮೆ ಕಸ ಸಂಗ್ರಹ ಮಾಡಿ ಹೋದರೆ ಐದಾರು ದಿನ ಕಳೆದರೂ ಪಾಲಿಕೆ ಕಸ ಸಂಗ್ರಹ ವಾಹನ ಬರುವುದಿಲ್ಲ. ಈ ಕುರಿತು ಕಾರ್ಪೊರೇಟರ್ ಅವರಿಗೆ ಕರೆ ಮಾಡಿದರೂ ಸ್ಪಂದಿಸುವುದಿಲ್ಲ. ನಮ್ಮ ಏರಿಯಾದಲ್ಲಿ ಮೂಲ ಸೌಕರ್ಯವನ್ನು ಒದಗಿಸಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಕಸ ಸಂಗ್ರಹ ವಾಹನಗಳು ದೌಡು
ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಎರಡು ಕಸ ಸಂಗ್ರಹ ವಾಹನಗಳು ಕಳುಹಿಸಿದರು. ವಾಹನಗಳನ್ನು ತಡೆದು ನಿಲ್ಲಿಸಿದ ಮಹಿಳೆಯರು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೆ ಪರಿಸ್ಥಿತಿ ಮುಂದುವರೆದರೆ ಹೋರಾಟ ತೀವ್ರಗೊಳಿಸುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದರು.ಶೃತಿ ಗೀತೇಂದ್ರ ಗೌಡ, ಲಕ್ಷ್ಮೀ, ಮಂಜುಳಾ, ಮಂಜುನಾಥ್, ಪವನ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.