ಶಿವಮೊಗ್ಗ ಜಿಲ್ಲೆ…
ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಕಲಿತ ಬಿಡಬಾರದು ಎಂಬ ಕಾರಣಕ್ಕೆ ಕಲೆಗಾರನ ವಿಷ್ಣು ಕುಮಾರ್ ಕೈಯಲ್ಲಿ ಚಿತ್ರಗಳು ಮೂಡಿ ಬಂದಿದೆ.
ಇಂದಿನ ಆಧುನಿಕ ದಿನದಲ್ಲಿ ಕಂಪ್ಯೂಟರ್ ಡಿಜಿಟಲ್ ಫ್ಲೆಕ್ಸ್ ನಡುವೆಯೂ ತನ್ನದೇ ಆದ ವಿಭಿನ್ನ ಚಿತ್ರದ ಮೂಲಕ ಕಲಾವಿದ.
ಭದ್ರಾವತಿ ತಾಲೂಕು…
ಉಕ್ಕಿನ ನಗರ ಭದ್ರಾವತಿ ನಿವಾಸಿ ಚಂದ್ರಶೇಖರ್ ದಂಪತಿ ದ್ವಿತೀಯ ಪುತ್ರ ವಿಷ್ಣು ಕುಮಾರ್ ಬಾಲ್ಯದಿಂದಲೂ ಚಿತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಅವರ ಪರಿಶ್ರಮಕ್ಕೆ ಮನೆಯಲ್ಲಿ ಸಹ ಪ್ರೋತ್ಸಾಹ ನೀಡಿದರು.
ಶಿವಮೊಗ್ಗದ ಖ್ಯಾತ ಕಲಾವಿದರಾದ ಜ್ಞಾನೇಶ್ವರ್ ಹಾಗೂ ಶಿಲ್ಪಕಲೆಯ ತರಬೇತಿ ಪಡೆದು ಫುಡ್ ಪೇಂಟಿಂಗ್ ಪೆನ್ಸಿಲ್ ಸ್ಕೆಚ್ ವೆಂಗ್ಯ ಚಿತ್ರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬ ಮದುವೆ ಸಮಾರಂಭ ವಿಶೇಷ ಸಮಾರಂಭದಲ್ಲಿ ಮತ್ತು ಇತರ ವಿಶೇಷ ಸಮಾರಂಭದಲ್ಲಿ ಎಷ್ಟು ಕುಮಾರ್ ಅವರು ಕೆಲಸವನ್ನು ಮಾಡುತ್ತಾರೆ.
ಕಲೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ವಿಷ್ಣು ಕುಮಾರ್ ಭದ್ರಾವತಿಯಲ್ಲಿ ಎಲ್ಲಾ ವಯಸ್ಸಿನವರಿಗೂ ಚಿತ್ರಕಲೆ ಕಲಿಯಲು ತರಬೇತಿ ನೀಡುತ್ತಾರೆ.
ವಿಷ್ಣು ಕುಮಾರ್ ಕೈಯಲ್ಲಿ ಮೂಡಿ ಬಂದ ಚಿತ್ರಗಳು ಕುವೆಂಪು ಕಲಾಂ ದರಾಬೇಂದ್ರೆ ಗಿರೀಶ್ ಕಾರ್ನಾಡ್ ಗಾಂಧೀಜಿ ಭಾವಚಿತ್ರ ಹಾಗೂ ಮೂರ್ತಿಗಳನ್ನು ತಯಾರಿಸುವ ಮೂಲಕ ಕಲಾವಿದರನ್ನು ಗಮನ ಸೆಳೆಯುತ್ತದೆ.