ಶಿವಮೊಗ್ಗ ನ್ಯೂಸ್…
ಜಾರ್ಖಂಡ್ ನ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರು ಅಡಿಕೆಯನ್ನು ನಿಷೇಧ ಮಾಡಬೇಕು ಎಂದು ಹೇಳಿರುವುದನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಬಿ.ಎ ರಮೇಶ ಹೆಗ್ಡೆ ಹೇಳಿದರು.
ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಭಾರತೀಯ ಸಂಸ್ಕ್ರತಿಯಲ್ಲಿ ಅಡಿಕೆಗೆ ಪೂಜ್ಯ ಸ್ಥಾನವಿದೆ. ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿದೆ. ಔಷಧೀಯ ಗುಣ ಅಡಿಕೆಯಲ್ಲಿದೆ ಹೀಗಿದ್ದರು ನಿಶಿಕಾಂತ್ ಅಡಿಕೆಗೆ ಕ್ಯಾನ್ಸರ್ ಕಾರಕ ಇದನ್ನು ನೀಷೆಧ ಮಾಡಬೇಕು ಎಂದು ಹೇಳಿರುವುದು ಅತ್ಯಂತ ಖಂಡನೀಯ. ಬಿಜೆಪಿ ಸರ್ಕಾರ ಅಡಿಕೆ ವಿರೋಧದ ಮುಂದುವರೆದ ಅಪಪ್ರಚಾರದ ಅಭಿಯಾನ ಇದಾಗಿದೆ ಎಂದರು.
ಒಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಡಿಕೆಗೆ ಗೌರವ ತಂದುಕೊಡುತ್ತೆವೆ. ಬೆಳೆಗಾರರ ಹಿತರಕ್ಷಣೆ ಮಾಡುತ್ತೇವೆ ಎಂದು ಚುನಾವಣಾ ಪ್ರಚಾರ ಮಾಡಿ ಗೆದ್ದುಬಂದು ಸರ್ಕಾರ ನಡೆಸುತ್ತಿದ್ದಾರೆ. ಈಗ ತಮ್ಮದೇ ಪಕ್ಷದ ಸಂಸದರೊಬ್ಬರು ಅಡಿಕೆಯ ಮಾನ ತೆಗೆಯುತ್ತಿದ್ದರೂ ಕೂಡ ಸುಮ್ಮನಿದ್ದಾರೆ. ಬಿಜೆಪಿ ಸರ್ಕಾರ ಬಂದಮೇಲೆಯೆ ಅಡಿಕೆಗೆ ಮಾನ ಹೋಗಿದೆ. ಇದು ಇವತ್ತಿನ ಮಾತಲ್ಲ 2000 ಇಸವಿಯಲ್ಲಿಯೇ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಂದಿನ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ, ಪಿ. ರಾಮಭಟ್ ಮುಂತಾದವರು ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದರು ಎಂದರು.
ಇದಲ್ಲದೇ ಕೇಂದ್ರ ಸಚಿವ ಅನುಪ್ರಿಯ ಪಟೇಲ್, ಅಶ್ವಿನ್ ಕುಮಾರ್ ಕೂಡ ಅಡಿಕೆ ವಿರೋಧಿಗಳಾಗಿದ್ದರು.
ಅಷ್ಟೇಕೆ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿ ವೆಬ್ ಸೈಟ್ ನಲ್ಲಿ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿದ್ದರು. ಹೀಗೆ ಬಿಜೆಪಿ ಸರ್ಕಾರ ಅಡಿಕೆಗೆ ಅವಮಾನ ಮಾಡುತ್ತಲೇ ಬಂದಿದೆ, 2018 ರ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಥಹಳ್ಳಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದರು. ಅರಗ ಜ್ಞಾನೇಂದ್ರ ಕೂಡ ಅಡಿಕೆಗೆ ಗೌರವ ತಂದುಕೊಡುವುದಾಗಿ ಹೇಳಿದ್ದರು. ಆದರೆ, ಅಡಿಕೆಗೆ ಇದ್ದ ಗೌರವವನ್ನು ಕೂಡಾ ಇವರೆಲ್ಲ ಕಳೆದಿದ್ದಾರೆ ಎಂದರು.
ನಿಶಿಕಾಂತ್ ಹೇಳಿಕೆಯನ್ನು ರಾಜ್ಯದ ಬಿಜೆಪಿ ಸಂಸದರು ಮೌನವಾಗಿ ಸ್ವಾಗತ ಮಾಡಿದ್ದಾರೆ. ಇವರ ಮೌನ ಅಡಿಕೆ ಹಾನಿಕಾರಕ ಎಂದೇ ಅರ್ಥವಾಗುತ್ತದೆ. ತಮ್ಮ ಮೌನ ಬಿಟ್ಟು ಸಂಸದ ನಿಶಿಕಾಂತ್ ಹೇಳಿಕೆಯನ್ನು ಖಂಡಿಸಬೇಕು.
ಮೋದಿಯವರು ಸುಪ್ರೀಂ ಕೋರ್ಟ್ ಗೆ ಅಡಿಕೆ ಹಾನಿಕಾರಕ ಅಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ, ಅಡಿಕೆ ಬೆಳೆಗಾರರ ಹಿತಕಾಯಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಪ್ರಮುಖರಾರ ಹೊಳೆಮಡಿಲು ವೆಂಕಟೇಶ್, ಡಿ.ಸಿ ನಿರಂಜನ, ಸುರೇಂದ್ರ ಇದ್ದರು.